ನಾಸಾದ ವೈಡ್-ಫೀಲ್ಡ್ ಇನ್ಫ್ರಾರೆಡ್ ಸರ್ವೆ ಎಕ್ಸ್ಪ್ಲೋರರ್ (WISE) ದೂರದರ್ಶಕವು ಭೂಮಿಯತ್ತ ಧಾವಿಸುತ್ತಿರುವ ʻ2022 QF2ʼ ಎಂಬ ಕ್ಷುದ್ರಗ್ರಹವವನ್ನು ಸೆರೆಹಿಡಿದಿದ್ದು, ಇಂದು(ಸೆಪ್ಟೆಂಬರ್ 11)ಕ್ಕೆ ಭೂಮಿಯತ್ತ ಸಮೀಪಿಸುತ್ತಿದೆ ಎಂದು ನಾಸಾ ತಿಳಿಸಿದೆ.
ಭೂಮಿಯ ಸಮೀಪವಿರುವ ವಸ್ತು ವೈಡ್-ಫೀಲ್ಡ್ ಇನ್ಫ್ರಾರೆಡ್ ಸರ್ವೆ ಎಕ್ಸ್ಪ್ಲೋರರ್ (NEOWISE) NASA ನಿರ್ವಹಿಸುವ ಒಂದು ತಾಂತ್ರಿಕ ಅದ್ಭುತವಾಗಿದೆ. ಇದು ಅತಿಗೆಂಪು ಖಗೋಳ ಬಾಹ್ಯಾಕಾಶ ದೂರದರ್ಶಕವಾಗಿದ್ದು, ಸೌರವ್ಯೂಹದಲ್ಲಿ ಸಾಧ್ಯವಾದಷ್ಟು ಕ್ಷುದ್ರಗ್ರಹಗಳನ್ನು ಕಂಡುಹಿಡಿಯುವ ಕಾರ್ಯವನ್ನು ನಿರ್ವಹಿಸಲಾಗಿದೆ. ಈ ಮೂಲಕ ಇತ್ತೀಚೆಗೆ ನಾಸಾ ಅಪಾಯಕಾರಿ ಕ್ಷುದ್ರಗ್ರಹವನ್ನು ಗುರುತಿಸಿದ್ದಾರೆ. ಇದು ಇಂದು ಭೂಮಿಯ ಹತ್ತಿರದಿಂದ ಸಾಗುತ್ತದೆ.
ಈ ಕ್ಷುದ್ರಗ್ರಹದ ಗಾತ್ರವು 140 ಅಡಿ ಅಗಲವಿದ್ದು, 30,384 ಕಿಮೀ / ಗಂಟೆ ವೇಗದಲ್ಲಿ ಚಲಿಸುತ್ತದೆ. ಇದು ಭೂಮಿಯ ಹತ್ತಿರದಿಂದ ಹಾದು ಹೋಗುತ್ತದೆ. ಇದರಿಂದ ನಮಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಾಸಾ ತಿಳಿಸಿದೆ.
BIG BREAKING NEWS: ತೆಲುಗು ಹಿರಿಯ ನಟ ʻಕೃಷ್ಣಂ ರಾಜುʼ ಇನ್ನಿಲ್ಲ | Krishnam Raju No More
ವಿದ್ಯಾರ್ಥಿಗಳೇ ಗಮನಿಸಿ : `CET’ ದಾಖಲಾತಿ ಪರಿಶೀಲನೆಗೆ ಮತ್ತೊಂದು ಅವಕಾಶ ನೀಡಿದ ಕೆಇಎ