Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾಕ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ: ಒಬ್ಬ ಸಾವು, 38 ಮಂದಿ ರಕ್ಷಣೆ

12/03/2026 6:52 AM

BIG NEWS : ರಾಜ್ಯದಲ್ಲಿ 100 ಕ್ಕೆ 33 ಮಾರ್ಕ್ಸ್ ತೆಗೆದ್ರೂ ಪಾಸ್ : `ಪ್ರಥಮ PUC’ಗೂ ನಿಯಮ ವಿಸ್ತರಿಸಿದ ಸರ್ಕಾರ !

12/03/2026 6:52 AM

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

12/03/2026 6:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!
KARNATAKA

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

By kannadanewsnow5712/03/2026 6:45 AM

ಇಂದಿನ ಧಾವಂತದ ಬದುಕಿನಲ್ಲಿ ಡೆಡ್‌ಲೈನ್‌ಗಳು ಮತ್ತು ಟಾರ್ಗೆಟ್‌ಗಳ ಬೆನ್ನತ್ತಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದೀರಾ? ಹಾಗಿದ್ದರೆ ನೀವು ‘ಬರ್ನೌಟ್ ಸಿಂಡ್ರೋಮ್’ (Burnout Syndrome) ಬಗ್ಗೆ ತಿಳಿಯಲೇಬೇಕು. ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಭಾರತದ ಶೇ. 60 ರಷ್ಟು ಉದ್ಯೋಗಿಗಳು ಈ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಏನಿದು ಬರ್ನೌಟ್ ಸಿಂಡ್ರೋಮ್? ದೇಹದ ಮೇಲಾಗುವ ಪರಿಣಾಮಗಳೇನು?

ನಿರಂತರ ಕೆಲಸದ ಒತ್ತಡದಿಂದಾಗಿ ದೇಹದಲ್ಲಿ ಒತ್ತಡವನ್ನು ನಿಯಂತ್ರಿಸುವ ಕಾರ್ಟಿಸೋಲ್ ಮತ್ತು ನಿದ್ರೆಯನ್ನು ನಿಯಂತ್ರಿಸುವ ಮೆಲಟೋನಿನ್ ಹಾರ್ಮೋನುಗಳ ಸಮತೋಲನ ತಪ್ಪುತ್ತದೆ. ಇದರಿಂದ:

ತೀವ್ರ ನಿಶ್ಯಕ್ತಿ ಮತ್ತು ನಿದ್ರಾಹೀನತೆ ಕಾಡುತ್ತದೆ.

ರೋಗನಿರೋಧಕ ಶಕ್ತಿ ಕ್ಷೀಣಿಸಿ, ಹೃದಯ ಮತ್ತು ಜೀರ್ಣಾಂಗವ್ಯೂಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಸಿಟ್ಟು, ಕಿರಿಕಿರಿ, ಸ್ನಾಯು ನೋವು ಮತ್ತು ಅತಿಯಾದ ಸಿಹಿ ತಿನ್ನುವ ಬಯಕೆ ಉಂಟಾಗುತ್ತದೆ.

ಇದೆಲ್ಲವೂ ಅಂತಿಮವಾಗಿ ಅಧಿಕ ರಕ್ತದೊತ್ತಡಕ್ಕೆ (High BP) ದಾರಿಯಾಗುತ್ತದೆ.

ಬ್ರೈನ್ ಸ್ಟ್ರೋಕ್ ಭೀತಿ!

ಒತ್ತಡದಿಂದ ಹೆಚ್ಚಾಗುವ ಬಿಪಿಯನ್ನು ನಿರ್ಲಕ್ಷಿಸಿದರೆ ಅದು ಪ್ರಾಣಕ್ಕೆ ಕುತ್ತು ತರಬಹುದು. ರಕ್ತದೊತ್ತಡ ಹೆಚ್ಚಾದಾಗ ಮೆದುಳಿನ ನರಗಳು ಒಡೆದು ಬ್ರೈನ್ ಹೆಮರೇಜ್ (Brain Hemorrhage) ಉಂಟಾಗಬಹುದು. ಇದು ಪಾರ್ಶ್ವವಾಯು (Stroke), ಹೃದಯಾಘಾತ, ಕಿಡ್ನಿ ವೈಫಲ್ಯ ಮತ್ತು ಮರೆವಿನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಎಚ್ಚರಿಕೆ ಲಕ್ಷಣಗಳು: ಪದೇ ಪದೇ ತಲೆನೋವು, ಉಸಿರಾಟದ ತೊಂದರೆ, ತಲೆಸುತ್ತು, ನರಗಳಲ್ಲಿ ಜುಮುಗುಟ್ಟುವಿಕೆ ಮತ್ತು ಅತಿಯಾದ ಎದೆಬಡಿತ.

ಬಚಾವ್ ಆಗಲು ಇಲ್ಲಿದೆ ‘3S’ ಫಾರ್ಮುಲಾ!
ಪ್ರಖ್ಯಾತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಈ ಒತ್ತಡದಿಂದ ಹೊರಬರಲು ಒಂದು ಸರಳ ಸೂತ್ರವನ್ನು ಸೂಚಿಸಿದೆ. ಅದೇ 3S (Sit-Stand-Stretch):

ನಿಮ್ಮ ಕೆಲಸದ ಸಮಯವನ್ನು ಪ್ರತಿ 30 ನಿಮಿಷಗಳ ಸ್ಲಾಟ್ ಆಗಿ ವಿಂಗಡಿಸಿ:

Sit (ಕುಳಿತುಕೊಳ್ಳಿ): 20 ನಿಮಿಷ ಕುಳಿತು ಕೆಲಸ ಮಾಡಿ.

Stand (ನಿಂತುಕೊಳ್ಳಿ): 8 ನಿಮಿಷಗಳ ಕಾಲ ನಿಂತು ಕೆಲಸ ಮಾಡಿ.

Stretch (ಮೈಕೈ ಸೆಳೆತ): 2 ನಿಮಿಷಗಳ ಕಾಲ ದೇಹವನ್ನು ಸ್ಟ್ರೆಚ್ ಮಾಡಿ.
ಈ ಸಣ್ಣ ಬದಲಾವಣೆಯು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಅದ್ಭುತ ಸುಧಾರಣೆ ತರುತ್ತದೆ.

ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು:

ಯೋಗ ಮತ್ತು ಧ್ಯಾನ: ರಕ್ತದೊತ್ತಡ ನಿಯಂತ್ರಣಕ್ಕೆ ಇವು ರಾಮಬಾಣ. ಆದರೆ, ಅಧಿಕ ಬಿಪಿ ಇರುವವರು ಶೀರ್ಷಾಸನ, ಸರ್ವಾಂಗಾಸನದಂತಹ ಕಠಿಣ ಆಸನಗಳನ್ನು ಮಾಡಬಾರದು.

ಆಹಾರ ಕ್ರಮ: ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ. ಜಂಕ್ ಫುಡ್ ಬಿಟ್ಟು ಪೌಷ್ಟಿಕ ಆಹಾರ ಸೇವಿಸಿ. ಹಸಿವಿನಿಂದ ಇರಬೇಡಿ (ಉಪವಾಸ ಬೇಡ).

ದಿನನಿತ್ಯದ ಡಯಟ್‌ನಲ್ಲಿ ಇರಲಿ: ಖರ್ಜೂರ, ದಾಲ್ಚಿನ್ನಿ, ಒಣದ್ರಾಕ್ಷಿ, ಕ್ಯಾರೆಟ್, ಶುಂಠಿ ಮತ್ತು ಟೊಮೆಟೊಗಳನ್ನು ಬಳಸುವುದರಿಂದ ಬಿಪಿ ನಿಯಂತ್ರಣದಲ್ಲಿರುತ್ತದೆ.

ಜೀವನಶೈಲಿ: ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸಿ. ಮದ್ಯಪಾನದಿಂದ ದೂರವಿರಿ ಮತ್ತು ಅತಿಯಾಗಿ ನೀರು ಕುಡಿಯಿರಿ.

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಅರಿವಿಗಾಗಿ ಮಾತ್ರ. ಆರೋಗ್ಯ ಸಮಸ್ಯೆಗಳಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

ALERT: High BP often leads to 'brain stroke' due to 'tension'. Beware: Here comes the Brahmastra!
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ 100 ಕ್ಕೆ 33 ಮಾರ್ಕ್ಸ್ ತೆಗೆದ್ರೂ ಪಾಸ್ : `ಪ್ರಥಮ PUC’ಗೂ ನಿಯಮ ವಿಸ್ತರಿಸಿದ ಸರ್ಕಾರ !

12/03/2026 6:52 AM2 Mins Read

ಕರ್ನಾಟಕದ ಗ್ರಾಮಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಈ ಮಾಹಿತಿ ಒದಗಿಸುವುದು ಕಡ್ಡಾಯ !

12/03/2026 6:33 AM2 Mins Read

ತೂಕ ಇಳಿಸಲು ಬೆಸ್ಟ್ : ಕರ್ನಾಟಕ ಸ್ಪೆಷಲ್ ಅಕ್ಕಿ ರೊಟ್ಟಿ, ಒಮ್ಮೆ ಸವಿದರೆ ಮತ್ತೆ ಮತ್ತೆ ಬೇಕೆನಿಸುವುದು !

12/03/2026 6:30 AM2 Mins Read
Recent News

ಇರಾಕ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ: ಒಬ್ಬ ಸಾವು, 38 ಮಂದಿ ರಕ್ಷಣೆ

12/03/2026 6:52 AM

BIG NEWS : ರಾಜ್ಯದಲ್ಲಿ 100 ಕ್ಕೆ 33 ಮಾರ್ಕ್ಸ್ ತೆಗೆದ್ರೂ ಪಾಸ್ : `ಪ್ರಥಮ PUC’ಗೂ ನಿಯಮ ವಿಸ್ತರಿಸಿದ ಸರ್ಕಾರ !

12/03/2026 6:52 AM

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

12/03/2026 6:45 AM

ಕರ್ನಾಟಕದ ಗ್ರಾಮಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಈ ಮಾಹಿತಿ ಒದಗಿಸುವುದು ಕಡ್ಡಾಯ !

12/03/2026 6:33 AM
State News
KARNATAKA

BIG NEWS : ರಾಜ್ಯದಲ್ಲಿ 100 ಕ್ಕೆ 33 ಮಾರ್ಕ್ಸ್ ತೆಗೆದ್ರೂ ಪಾಸ್ : `ಪ್ರಥಮ PUC’ಗೂ ನಿಯಮ ವಿಸ್ತರಿಸಿದ ಸರ್ಕಾರ !

By kannadanewsnow5712/03/2026 6:52 AM KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ದ್ವಿತೀಯ ಪಿಯುಸಿ ಉತ್ತೀರ್ಣಕ್ಕೆ ಶೇಕಡಾ ಪ್ರಮಾಣವನ್ನು ನಿಗದಿ ಪಡಿಸಲಾಗಿದೆ. ಇದೀಗ ಮುಂದುವರೆದು ಪ್ರಥಮ ಪಿಯುಸಿಗೂ…

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

12/03/2026 6:45 AM

ಕರ್ನಾಟಕದ ಗ್ರಾಮಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಈ ಮಾಹಿತಿ ಒದಗಿಸುವುದು ಕಡ್ಡಾಯ !

12/03/2026 6:33 AM

ತೂಕ ಇಳಿಸಲು ಬೆಸ್ಟ್ : ಕರ್ನಾಟಕ ಸ್ಪೆಷಲ್ ಅಕ್ಕಿ ರೊಟ್ಟಿ, ಒಮ್ಮೆ ಸವಿದರೆ ಮತ್ತೆ ಮತ್ತೆ ಬೇಕೆನಿಸುವುದು !

12/03/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.