ನವದೆಹಲಿ: ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ದಾರಿತಪ್ಪಿಸುವ ಸಂದೇಶದ ಬಗ್ಗೆ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ. ಅಲ್ಲದೇ ವಾಟ್ಸ್ ಅಪ್ ನಲ್ಲಿ ಬರುವಂತ ಆ ಸಂದೇಶವನ್ನು ಕ್ಲಿಕ್ ಮಾಡದಂತೆ ಎಚ್ಚರಿಸಿದೆ.
ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ಮತ್ತು ಕಾರ್ಯಾಚರಣೆಯಲ್ಲಿ ಗಾಯಗೊಂಡ ಅಥವಾ ಸಾವನ್ನಪ್ಪಿದ ಸೈನಿಕರಿಗೆ ದೇಣಿಗೆ ಕೋರುವುದಾಗಿ ಮತ್ತು ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣವನ್ನು ನಿರ್ದೇಶಿಸುವುದಾಗಿ ಎನ್ನುವಂತ ಸಂದೇಶ ಬಂದರೇ ಎಚ್ಚರ ವಹಿಸುವಂತೆ ತಿಳಿಸಿದೆ.
ವಾಟ್ಸ್ ಆಪ್ ಮೂಲಕ ಸೇನೆಗೆ ದೇಣಿಗೆ ಸಂಗ್ರಹಿಸುವಂತ ಲಿಂಕ್ ಗಳು ಹರಿದಾಡುತ್ತಿದ್ದಾವೆ. ಅವುಗಳನ್ನು ಕ್ಲಿಕ್ ಮಾಡಬೇಡಿ. ಭಾರತೀಯ ಸೇನೆಯಿಂದ ಈ ಥರದ ಯಾವುದೇ ಧೇಣಿಗೆಯನ್ನು ಸಂಗ್ರಹಿಸುತ್ತಿಲ್ಲ ಎಂಬುದಾಗಿ ಭಾರತೀಯ ರಕ್ಷಣಾ ಸಚಿವಾಲಯ ಸ್ಪಷ್ಟ ಪಡಿಸಿದೆ.
A WhatsApp message claims that the Govt has opened a bank account for the modernization of the Indian Army.#PIBFactCheck
❌ This claim is MISLEADING.
❌ The mentioned bank account is NOT for Army modernization or weapon purchases.✅ It belongs to the Armed Forces Battle… pic.twitter.com/hXjXtQebjS
— Ministry of Defence, Government of India (@SpokespersonMoD) April 27, 2025
ಜನರು ಜಾಗರೂಕರಾಗಿರಬೇಕು ಮತ್ತು ಅಂತಹ ಮೋಸದ ಸಂದೇಶಗಳಿಗೆ ಬಲಿಯಾಗಬಾರದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಕ್ರಿಯ ಯುದ್ಧ ಕಾರ್ಯಾಚರಣೆಗಳ ಸಮಯದಲ್ಲಿ ಕೊಲ್ಲಲ್ಪಟ್ಟ ಅಥವಾ ಅಂಗವಿಕಲ ಸೈನಿಕರಿಗಾಗಿ ಸರ್ಕಾರವು ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ. 2020 ರಲ್ಲಿ, ಸರ್ಕಾರವು ‘ಸಶಸ್ತ್ರ ಪಡೆಗಳ ಯುದ್ಧ ಅಪಘಾತ ಕಲ್ಯಾಣ ನಿಧಿ (AFBCWF)’ ಅನ್ನು ಸ್ಥಾಪಿಸಿತು. ಇದನ್ನು ಸಕ್ರಿಯ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಪ್ರಾಣ ತ್ಯಾಗ ಮಾಡುವ ಅಥವಾ ತೀವ್ರವಾಗಿ ಗಾಯಗೊಂಡ ಸೈನಿಕರು, ನಾವಿಕರು ಮತ್ತು ವಾಯುಪಡೆಯ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ನೀಡಲು ಬಳಸಲಾಗುತ್ತದೆ.
ಇದರ ಹೊರತಾಗಿ ಖಾಸಗಿಯಾಗಿ ಯಾವುದೇ ದೇಣಿಗೆಯನ್ನು ಸಂಗ್ರಹಿಸುತ್ತಿಲ್ಲ. ಅಂತಹ ಸಂದೇಶ, ಲಿಂಕ್ ಗಳು ಸುಳ್ಳು, ಸತ್ಯಕ್ಕೆ ದೂರವಾಗಿರುವಂತವು, ಮೋಸದ ಲಿಂಕ್ ಗಳಾಗಿದ್ದಾವೆ. ಯಾರೂ ಮೋಸ ಹೋಗಬೇಡಿ. ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಕೇಂದ್ರ ರಕ್ಷಣಾ ಸಚಿವಾಲಯ ಮನವಿ ಮಾಡಿದೆ.
BREAKING: ತಮಿಳುನಾಡಿಲ್ಲಿ ಸಚಿವ ಸಂಪುಟ ಪುನಾರಚನೆ: ಸಚಿವ ಸ್ಥಾನಕ್ಕೆ ಸೆಂಥಿಲ್ ಬಾಲಾಜಿ, ಪೊನ್ನುಡಿ ರಾಜೀನಾಮೆ
ಮನ್ ಕಿ ಬಾತ್: ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯವರ ಬಲವಾದ ಸಂದೇಶ, ಏಕತೆಗೆ ಒತ್ತು | Mann ki baat