ಬೆಂಗಳೂರು : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳಾ ಟಕ್ಕಿಗೆ ಎರಡು ಕೋಟಿ ವಂಚನೆ ಎಸಗಲಾಗಿದೆ. ಬೆಂಗಳೂರಲ್ಲಿ ಮಹಿಳಾ ಟೆಕ್ಕಿ ಒಬ್ಬರು ತಮ್ಮ 2 ನಿವೇಶನ, ತಾವು ವಾಸವಿದ್ದ ಫ್ಲ್ಯಾಟ್ ಮಾರಿ ಸೈಬರ್ ವಂಚಕರಿಗೆ ಮಹಿಳಾ ಟೆಕ್ಕಿ 2 ಕೋಟಿ ಹಣ ಹಾಕಿದ್ದಾರೆ. ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಬಬಿತಾ ದಾಸ ವಂಚನೆಗೆ ಒಳಗಾದವರು. ಬಾಬೀತಾ ದಾಸ್ ಬೆಂಗಳೂರಿನ ವಿಜ್ಞಾನ ನಗರದ ನ್ಯೂತಿಪ್ಪಸಂದ್ರದ ನಿವಾಸಿಯಾಗಿದ್ದು ವೈಟ್ ಫೀಲ್ಡ್ ಸನ್ ಠಾಣೆಗೆ ಇದೀಗ ನೀಡಿದ್ದಾರೆ.
ಹತ್ತು ವರ್ಷದ ಮಗನ ಜೊತೆಗೆ ಬಬಿತಾದಾಸ್ ನ್ಯೂತಿಪ್ಪಸಂತರದ ಫ್ಲಾಟ್ ನಲ್ಲಿ ನೆಲೆಸಿದ್ದರು. ಕೆಲವು ತಿಂಗಳ ಹಿಂದೆ ಬ್ಲೂ ಡಾರ್ಟ್ ಕೊರಿಯರ್ ಹೆಸರಿನಲ್ಲಿ ಕರೆ ಬಂದಿತ್ತು ಹೇಳಿ ವಿಡಿಯೋ ಕರೆ ಮಾಡಿ ಹೆದರಿಸಿದ್ದಾರೆ. ಬ್ಲೂಡಾಟ್ ಕೊರಿಯರ್ ನಲ್ಲಿ ನಿಮ್ಮ ಹೆಸರಿನ ಬ್ಯಾಗೇಜ್ ಸಿಕ್ಕಿದೆ ಆ ಬ್ಯಾಗೇಜ್ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆ. ನಾವು ಮುಂಬೈ ಪೊಲೀಸರು ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದೇವೆ ನಾವು ನಿಮ್ಮನ್ನು ವೆರಿಫೈ ಮಾಡುವವರೆಗೂ ಎಲ್ಲೂ ಹೋಗುವ ಹಾಗಿಲ್ಲ ಎಂದು ಹೇಳಿದ್ದಾರೆ.
ನಾವು ಹೇಳುವ ಒಂದು ಆಪ್ ನೀವು ಇನ್ಸ್ಟಾಲ್ ಮಾಡಿಕೊಳ್ಳಬೇಕು ಆಪ್ ಮೂಲಕ ನಿಮ್ಮ ಖಾತೆಗೆ ನಾವು ಕೇಳಿದಷ್ಟು ಹಣ ಹಾಕಬೇಕು ನಾವು ಹೇಳಿದಂತೆ ಕೇಳಿಲ್ಲ ಅಂದರೆ ನಿಮ್ಮ ಮಗನ ಜೀವನಕ್ಕೆ ಸಮಸ್ಯೆ ಆಗಲಿದೆ ಮುಂಬೈ ಪೊಲೀಸರೇ ಕರೆ ಮಾಡಿರಬಹುದು ಭಯಭೀತರಾಗಿದ್ದಾರೆ ಈ ವೇಳೆ ಬಾಬೀತಾ ದಾಸ ನನ್ನನ್ನು ಅರೆಸ್ಟ್ ಮಾಡಬಹುದು ಎಂದು ವಂಚಕರ ಮಾತು ಕೇಳಿದ್ದಾರೆ. ಸೈಬರ್ ವಂಚಕರಿಗೆ ಹಣ ನೀಡಲು ಮಾಲೂರಿನಲ್ಲಿ ಇದ್ದಂತಹ ಎರಡು ಸೈಟ್ ಮಾರಾಟ ಮಾಡಿದ್ದಾರೆ.
ಕಡಿಮೆ ಬೆಲೆಗೆ 2 ಸೈಟ್ ಮಾರಿ ವಂಚಕರ ಖಾತೆಗೆ ಟ್ರಾನ್ಸ್ಫರ್ ಮಾಡಿದ್ದಾರೆ ಅಲ್ಲದೆ ವಿಜ್ಞಾನ ನಗರದಲ್ಲಿ ತಾವು ಇದ್ದ ಫ್ಲ್ಯಾಟ್ ಕೂಡ ಮಾರಿದ್ದಾರೆ ಅಷ್ಟೇ ಅಲ್ಲದೆ ಐಸಿಐಸಿಐ ಬ್ಯಾಂಕ್ ನಲ್ಲಿ ಸಾಲ ಪಡೆದು ವಂಚಕರಿಗೆ ವರ್ಗಾಯಿಸಿದ್ದಾರೆ ಅಂತ ಹಂತವಾಗಿ ಸೈಬರ್ ವಂಚಕರ ಖಾತೆಗೆ ಎರಡು ಕೋಟಿ ರೂಪಾಯಿ ಹಣ ಟ್ರಾನ್ಸ್ಫರ್ ಮಾಡಿದ್ದಾರೆ. ನಂತರ ಮೋಸ ಹೋಗಿರುವುದು ಗೊತ್ತಾಗಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಸೆನ್ ಠಾಣೆ ಪೋಲೀಸರು ಕೇಸ್ ದಾಖಲಿಸಿಕೊಂಡು ವಂಚಕರ ಪತ್ತೆಗೆ ಮುಂದಾಗಿದ್ದಾರೆ.








