ಬೆಂಗಳೂರು : ಚಿಟ್ ಫಂಡ್ ನಲ್ಲಿ ಹಣ ಹೂಡಿಕೆ ಮುನ್ನ ಆದಷ್ಟು ಎಚ್ಚರದಿಂದ ಇರಿ. ಏಕೆಂದರೆ ಬೆಂಗಳೂರಿನಲ್ಲಿ ಚಿಟ್ ಫಂಡ್ ಹೆಸರಿನಲ್ಲಿ ಮಹಾ ವಂಚನೆ ಎಸಗಲಾಗಿದೆ. ಒಬ್ಬೊಬ್ಬರಿಂದ ಎರಡು ಕೋಟಿ 50 ಲಕ್ಷ ಹಣ ಪಡೆದು ವಂಚನೆ ಎಸಗಲಾಗಿದ್ದು, ನೂರಾರು ಜನರಿಂದ ಕೋಟಿ ಕೋಟಿ ಹಣ ಪಡೆದು ಮೋಸ ಎಸಗಲಾಗಿದೆ. ಲಕ್ಷಾಂತರ ಸಂಗ್ರಹಿಸಿ ಕೋಟಿ ಕೋಟಿ ಹಣ ವಂಚಿಸಸಲಾಗಿದೆ.ಇದೀಗ ಹಣ ಕಳೆದುಕೊಂಡ ನೂರಾರು ಜನರು ಬೀದಿ ಪಾಲಾಗಿದ್ದಾರೆ.
ಹೌದು ಬೆಂಗಳೂರಿನ ಸುಮಾರು 300ಕ್ಕೂ ಹೆಚ್ಚು ಜನರಿಗೆ ವಂಚನೆ ಸಿಕ್ಕಿದ್ದು ನವಶಕ್ತಿ ಚಿಟ್ ಫಂಡ್ ನಿಂದ 500 ಕ್ಕೂ ಹೆಚ್ಚು ಜನರಿಗೆ ಮೋಸ ಎಸಗಲಾಗಿದೆ. ಇದೀಗ ಮೋಸ ಹೋದವರು ಬೆಂಗಳೂರು ಕಮಿಷನರ್ ಗೆ ದೂರ ಸಲ್ಲಿಸಿದ್ದಾರೆ. ರಾಜಾಜಿನಗರ ಠಾಣೆಯಲ್ಲಿ ಕೇಸ್ ದಾಖಲಾದರೂ ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಹೀಗಾಗಿ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಗೃಹ ಸಚಿವರಿಗೂ ಕೂಡ ದೂರ ಸಲ್ಲಿಸಲಾಗಿದೆ. ಈ ಕುರಿತು ಸಿಐಡಿ ತನಿಖೆ ಮಾಡಿ ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಸರವಣ ಅನ್ನೋನು ಮೋಸ ಮಾಡಿದ್ದು, ಈ ಕುರಿತು ರಾಜಾಜಿನಗರ ಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ತಿಂಗಳಿಗೆ ನಾನು ಒಂದುವರೆಯಿಂದ ಎರಡು ಲಕ್ಷ ಕಟ್ತಿದ್ದೆ. ಸುಮಾರು 100 ಕೋಟಿಗೂ ಹೆಚ್ಚು ವಂಚನೆ ಎಸಗಿದ್ದಾರೆ. ಒಂದು ಎರಡು ಲಕ್ಷದಂತೆ ಸುಮಾರು 700ರಿಂದ 800 ಜನರು ಮೋಸ ಮಾಡಿದ್ದಾರೆ. ಒಂದು ತಿಂಗಳಲ್ಲಿ ಎರಡು ತಿಂಗಳಲ್ಲಿ ಹಣ ಕೊಡುತ್ತೇವೆ ಅಂತ ಹೇಳಿ ಮೋಸ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಣ ವಾಪಸ್ ಕೊಡಿಸಬೇಕು ಎಂದು ಮೋಸ ಹೋದವರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.