Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಭಾರತೀಯ ರಕ್ಷಣಾ ವಲಯದಲ್ಲಿ ಹೊಸ ಇತಿಹಾಸ: ಮೊದಲ ‘ಮೇಡ್ ಇನ್ ಇಂಡಿಯಾ’ ಸಿ-295 ಯುದ್ಧ ವಿಮಾನದ ಚೊಚ್ಚಲ ಹಾರಾಟ ಯಶಸ್ವಿ!

ALERT : ಸ್ನೇಹಿತರಿಂದ ಸಾಲ ಪಡೆಯುವವರೇ ಎಚ್ಚರ : ₹20,000 ಮೀರಿದರೆ `IT’ ನೋಟಿಸ್ ಗ್ಯಾರಂಟಿ.!

​’ನವ ಮಧ್ಯಮ ವರ್ಗದ ಕೈಬಿಡುವುದಿಲ್ಲ’: ದೇಶದ ಪ್ರಧಾನಿಯಾಗಿ 12 ವರ್ಷ ಪೂರೈಸಿದ ಹೆಮ್ಮೆಯಲ್ಲಿ ಪಿಎಂ ಮೋದಿ ಭರವಸೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಸ್ನೇಹಿತರಿಂದ ಸಾಲ ಪಡೆಯುವವರೇ ಎಚ್ಚರ : ₹20,000 ಮೀರಿದರೆ `IT’ ನೋಟಿಸ್ ಗ್ಯಾರಂಟಿ.!
KARNATAKA

ALERT : ಸ್ನೇಹಿತರಿಂದ ಸಾಲ ಪಡೆಯುವವರೇ ಎಚ್ಚರ : ₹20,000 ಮೀರಿದರೆ `IT’ ನೋಟಿಸ್ ಗ್ಯಾರಂಟಿ.!

By kannadanewsnow57

ನಗದು ವಹಿವಾಟುಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ (Income Tax Department) ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ. ದೇಶದಲ್ಲಿ ಪಾರದರ್ಶಕವಾಗಿ ಹಣಕಾಸು ವಹಿವಾಟುಗಳು ನಡೆಯಬೇಕೆಂಬ ಉದ್ದೇಶದಿಂದ ಐಟಿ ಇಲಾಖೆ ಹಲವು ಕಟ್ಟುನಿಟ್ಟಿನ ನಿಯಮ ಹಾಗೂ ಮಿತಿಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಪ್ರತಿಯೊಬ್ಬ ನಾಗರಿಕರೂ ಪಾಲಿಸುವುದು ಕಡ್ಡಾಯವಾಗಿದೆ.

ಸಾಮಾನ್ಯವಾಗಿ ತುರ್ತು ಸಂದರ್ಭಗಳಲ್ಲಿ ನಾವು ಸ್ನೇಹಿತರು ಅಥವಾ ಸಂಬಂಧಿಕರಿಂದ ಕೈಗಡವಾಗಿ (ಸಾಲ) ಹಣವನ್ನು ಪಡೆದುಕೊಳ್ಳುತ್ತೇವೆ. ಯಾವುದೇ ದಾಖಲೆಗಳಿಲ್ಲದೆ ನಗದು ರೂಪದಲ್ಲಿ ಇಂತಹ ವಹಿವಾಟುಗಳು ನಡೆಯುತ್ತವೆ. ಆದರೆ, ಇಂತಹ ದೊಡ್ಡ ಮೊತ್ತದ ನಗದು ವಹಿವಾಟುಗಳು ಕೂಡ ಐಟಿ ನಿಯಮಗಳ ಉಲ್ಲಂಘನೆಯ ವ್ಯಾಪ್ತಿಗೆ ಬರುತ್ತವೆ ಎಂಬುದು ನಿಮಗೆ ಗೊತ್ತೇ?

ಕೈಗಡ ವಹಿವಾಟಿಗೆ ಇದೆ ಕಠಿಣ ನಿಯಮ!
ಸ್ನೇಹಿತರು ಅಥವಾ ಪರಿಚಯಸ್ಥರಿಂದ ನಗದು ರೂಪದಲ್ಲಿ ಹಣವನ್ನು ಪಡೆಯುವ ವಿಷಯದಲ್ಲಿ ಆದಾಯ ತೆರಿಗೆ ಇಲಾಖೆ ಸ್ಪಷ್ಟ ಮಿತಿಯನ್ನು ವಿಧಿಸಿದೆ. ಐಟಿ ಕಾಯ್ದೆಯ ಸೆಕ್ಷನ್ 269SS ಪ್ರಕಾರ, ಯಾವುದೇ ವ್ಯಕ್ತಿಯಿಂದ ನಗದು ರೂಪದಲ್ಲಿ ರೂ. 20,000 ಕ್ಕಿಂತ ಹೆಚ್ಚು ಸಾಲ ಅಥವಾ ಠೇವಣಿಯನ್ನು ತೆಗೆದುಕೊಳ್ಳುವಂತಿಲ್ಲ.

ಒಂದು ವೇಳೆ ಈ ಮಿತಿಗಿಂತ ಹೆಚ್ಚು ಹಣವನ್ನು ನಗದು ರೂಪದಲ್ಲಿ ಪಡೆದರೆ, ಅದು ಐಟಿ ನಿಯಮಗಳ ಉಲ್ಲಂಘನೆಯಾಗುತ್ತದೆ. ಆದಾಯ ತೆರಿಗೆ ಇಲಾಖೆ ಇದನ್ನು ಪತ್ತೆಹಚ್ಚಿದರೆ, ಸಾಲ ನೀಡಿದವರಿಗೂ ಮತ್ತು ಸಾಲ ಪಡೆದವರಿಗೂ ಭಾರಿ ದಂಡ ವಿಧಿಸಲಾಗುತ್ತದೆ. ಸಾಲ ನೀಡಿದ ವ್ಯಕ್ತಿಗೆ ಆ ಹಣ ಎಲ್ಲಿಂದ ಬಂತು ಎಂಬ ಮೂಲದ ವಿವರಗಳನ್ನು ಐಟಿ ಇಲಾಖೆ ಕಲೆಹಾಕುತ್ತದೆ. ಸೂಕ್ತ ದಾಖಲೆಗಳನ್ನು ಒದಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಗಮನಿಸಿ: ಐಟಿ ಇಲಾಖೆಯಿಂದ ಯಾವುದೇ ನೋಟಿಸ್ ಅಥವಾ ತೊಂದರೆ ಬರದೇ ಇರಬೇಕಾದರೆ, ರೂ. 20,000 ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳನ್ನು ಆನ್ಲೈನ್ ಬ್ಯಾಂಕಿಂಗ್, ಚೆಕ್ (Check) ಅಥವಾ ಡಿಮ್ಯಾಂಡ್ ಡ್ರಾಫ್ಟ್ (DD) ಮೂಲಕವೇ ಮಾಡುವುದು ಸುರಕ್ಷಿತ.

ಇವುಗಳಿಗೆ ಮಾತ್ರ ಈ ನಿಯಮ ಅನ್ವಯ
ಸೆಕ್ಷನ್ 269SS: ಇದು ಕೇವಲ ವೈಯಕ್ತಿಕ ಸಾಲಗಳು ಮತ್ತು ಠೇವಣಿಗಳಿಗೆ (Deposits) ಮಾತ್ರ ಅನ್ವಯಿಸುತ್ತದೆ.

ಸೆಕ್ಷನ್ 269ST: ಈ ನಿಯಮದ ಪ್ರಕಾರ ಚಿನ್ನದ ಖರೀದಿ, ಆಸ್ತಿ ಮಾರಾಟ ಅಥವಾ ಇತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ರೂ. 2 ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವಂತಿಲ್ಲ.

ಬಿಸಿನೆಸ್ ಆಡಿಟಿಂಗ್ (Business Audit) ಅಥವಾ ವಾರ್ಷಿಕ ಮಾಹಿತಿ ಹೇಳಿಕೆ (Annual Information Statement – AIS) ಪರಿಶೀಲಿಸುವಾಗ ಇಂತಹ ಅಕ್ರಮ ವಹಿವಾಟುಗಳು ಐಟಿ ಇಲಾಖೆಯ ಕಣ್ಣಿಗೆ ಬೀಳುತ್ತವೆ. ನಿಯಮ ಉಲ್ಲಂಘನೆ ಸಾಬೀತಾದರೆ ಶೇ. 100 ರಷ್ಟು ದಂಡ (Penalty) ವಿಧಿಸಲು ಐಟಿ ಕಾಯ್ದೆಯಲ್ಲಿ ಅವಕಾಶವಿದೆ.

ಹಲವರಿಗೆ ಈ ಹೊಸ ನಿಯಮಗಳ ಬಗ್ಗೆ ಸರಿಯಾದ ಅರಿವಿಲ್ಲದೆ, “ನಮ್ಮವರೇ ತಾನೇ, ಏನೂ ಆಗುವುದಿಲ್ಲ” ಎಂಬ ಬೇಜವಾಬ್ದಾರಿತನದಿಂದ ನಗದು ವ್ಯವಹಾರ ನಡೆಸುತ್ತಾರೆ. ಆದರೆ ಇನ್ನು ಮುಂದೆ ಅಂತಹ ತಪ್ಪು ಮಾಡಬೇಡಿ, ಎಲ್ಲಾ ದೊಡ್ಡ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲೇ ಮಾಡಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

ALERT: Beware of those who borrow from friends: If you exceed ₹20000 you are guaranteed an `IT' notice!
Share. Facebook Twitter LinkedIn WhatsApp Email

Related Posts

SHOCKING : ಪೋಷಕರೇ ಎಚ್ಚರ : ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ತೆಂಗಿನಕಾಯಿ ಬಿದ್ದು ಸಾವು.!

1 Min Read

BIG NEWS : `ಚೆಕ್ ಬೌನ್ಸ್ ಕೇಸ್’ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

1 Min Read

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಜೈಲು ಪಾಲಾಗಿ ಇಂದಿಗೆ 2 ವರ್ಷ.!

2 Mins Read
Recent News

​ಭಾರತೀಯ ರಕ್ಷಣಾ ವಲಯದಲ್ಲಿ ಹೊಸ ಇತಿಹಾಸ: ಮೊದಲ ‘ಮೇಡ್ ಇನ್ ಇಂಡಿಯಾ’ ಸಿ-295 ಯುದ್ಧ ವಿಮಾನದ ಚೊಚ್ಚಲ ಹಾರಾಟ ಯಶಸ್ವಿ!

ALERT : ಸ್ನೇಹಿತರಿಂದ ಸಾಲ ಪಡೆಯುವವರೇ ಎಚ್ಚರ : ₹20,000 ಮೀರಿದರೆ `IT’ ನೋಟಿಸ್ ಗ್ಯಾರಂಟಿ.!

​’ನವ ಮಧ್ಯಮ ವರ್ಗದ ಕೈಬಿಡುವುದಿಲ್ಲ’: ದೇಶದ ಪ್ರಧಾನಿಯಾಗಿ 12 ವರ್ಷ ಪೂರೈಸಿದ ಹೆಮ್ಮೆಯಲ್ಲಿ ಪಿಎಂ ಮೋದಿ ಭರವಸೆ!

SHOCKING : ಪೋಷಕರೇ ಎಚ್ಚರ : ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ತೆಂಗಿನಕಾಯಿ ಬಿದ್ದು ಸಾವು.!

State News
KARNATAKA

ALERT : ಸ್ನೇಹಿತರಿಂದ ಸಾಲ ಪಡೆಯುವವರೇ ಎಚ್ಚರ : ₹20,000 ಮೀರಿದರೆ `IT’ ನೋಟಿಸ್ ಗ್ಯಾರಂಟಿ.!

By kannadanewsnow57 KARNATAKA 2 Mins Read

ನಗದು ವಹಿವಾಟುಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ (Income Tax Department) ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ. ದೇಶದಲ್ಲಿ ಪಾರದರ್ಶಕವಾಗಿ ಹಣಕಾಸು…

SHOCKING : ಪೋಷಕರೇ ಎಚ್ಚರ : ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ತೆಂಗಿನಕಾಯಿ ಬಿದ್ದು ಸಾವು.!

BIG NEWS : `ಚೆಕ್ ಬೌನ್ಸ್ ಕೇಸ್’ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಜೈಲು ಪಾಲಾಗಿ ಇಂದಿಗೆ 2 ವರ್ಷ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.