ಬೆಂಗಳೂರು : ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವ ಗ್ರಾಹಕರೇ ಎಚ್ಚರ, ಈಗ ಆನ್ ಲೈನ್ ಫುಡ್ ಬುಕ್ಕಿಂಗ್ ಗೂ ಸೈಬರ್ ವಂಚಕರು ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫುಡ್ ಬುಕ್ಕಿಂಗ್ ಆ್ಯಡ್ ನ್ನು ಕ್ಲಿಕ್ ಮಾಡಿ, ಡಿಟೇಲ್ಸ್ ತುಂಬಿದ್ರೆ ನಿಮ್ಮ ಖಾತೆಗೆ ಕನ್ನ ಬಿಳೋದು ಗೌರಂಟಿ.
BIGG BREAKING NEWS : ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಸ್ಪತ್ರೆಗೆ ದಾಖಲು
ಹೌದು, ಸೈಬರ್ ಖದೀಮರು ದಿನಕ್ಕೊಂದು ಹೊಸ ದಾರಿ ಹುಡುಕಿ ಜನರ ಖಾತೆಗಳಿಗೆ ಕನ್ನಾ ಹಾಕುತ್ತಿದ್ದಾರೆ. ಬೆಸ್ಕಾಂ ಬಿಲ್, ಆನ್ ಲೈನ್ ಶಾಪಿಂಗ್ ಆಯ್ತು, ಈಗ ಆನ್ ಲೈನ್ ಫುಡ್ ಬುಕ್ಕಿಂಗ್ ನಲ್ಲೂ ಆನ್ ಲೈನ್ ಖದೀಮರ ಆಟ ಶುರುವಾಗಿದೆ.
ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಆನ್ ಲೈನ್ ನಲ್ಲಿ ಫುಡ್ ಬುಕ್ಕಿಂಗ್ ಮಾಡೋದು ಸಹಜ. ಇಂತಹ ಆನ್ ಲೈನ್ ಫುಡ್ ಬುಕ್ಕಿಂಗ್ ನಲ್ಲೂ ಸೈಬರ್ ವಂಚಕರು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಕೆಲಸ ನಡೆಯುತ್ತಿದೆ. ಆನ್ ಲೈನ್ ನಲ್ಲಿ ಫುಡ್ ಬುಕ್ಕಿಂಗ್ ಮಾಡಲು ನಾನಾ ರೀತಿಯ ಆಫರ್ ಕೊಡ್ತಾರೆ, ಒಂದು ವೇಳೆ ಆ್ಯಪ್ ಡೌನ್ಲೋಡ್ ಮಾಡಿದ್ರೆ ಅವರು ಕೊಡುವ ಆಮಿಷಕ್ಕೆ ಬಲಿಯಾಗಿ ಅವರು ಕೇಳುವ ಮಾಹಿತಿಯಂತೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ನಂಬರ್ ಹಾಕಿದ್ರೆ ಹಂತ ಹಂತವಾಗಿ ಹಣ ಸೈಬರ್ ವಂಚಕರ ಕೈ ಸೇರುತ್ತೆ.
BIGG BREAKING NEWS : ಉಡುಪಿಯಲ್ಲಿ ಮತ್ತೆ ಭುಗಿಲೆದ್ದ ಧರ್ಮ ದಂಗಲ್ : ಅಂದು ಹಿಜಾಬ್, ಇಂದು ಅಜಾನ್ ಡ್ಯಾನ್ಸ್ ವಿವಾದ!
ಇಂತಹ ಘಟನೆ ಬೆಂಗಳೂರಿನ ರುಚಿ ಸಾಗರ್ ಹೆಸರಿನಲ್ಲಿರುವ ನಕಲಿ ಆ್ಯಪ್ ಡೌನ್ಲೋಡ್ ಮಾಡಿ ಇಮ್ರಾನ್ ಉಲ್ಲಾ ಬೇಗ್ ಎಂಬುವರು 2 ಲಕ್ಷದ 23 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. ಹಾಗೂ ದೀಪಿಕಾ ಎಂಬುವರ ಖಾತೆಯಲ್ಲಿ 60 ಸಾವಿರ ರೂ. ಹಣ ಕಟ್ ಆಗಿದೆ. ಸದ್ಯ ಘಟನೆ ಸಂಬಂಧ ಬೆಂಗಳೂರು ಪೂರ್ವ ವಿಭಾಗದ ಸೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.