ಬೆಂಗಳೂರು : ಚಿನ್ನ ಪಾಲಿಶ್ ಮಾಡೋ ನೆಪದಲ್ಲಿ ಬಂದು ಚಿನ್ನ ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.
ಮಹಿಳೆಯನ್ನ ಯಾಮಾರಿಸಿ ಚಿನ್ನ ಎಗರಿಸಿ ಖದಿಮರು ಎಸ್ಕೇಪ್ ಆಗಿದ್ದಾರೆ. ಕಲೀಮ್ ಪಾಷಾ ಎನ್ನುವವರ ಮನೆಯಲ್ಲಿ ಈ ಒಂದು ಘಟನೆ ನಡೆದಿದ್ದು, 30 ಗ್ರಾಂ ಚಿನ್ನದ ಸರ ಮತ್ತು ಒಂದು ಡಾಲರ್ ಸಮೇತ ಕಳ್ಳರು ಪರಾರಿಯಾಗಿದ್ದಾರೆ. ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ಮನೆಗೆ ಬಂದು ಪಾಲಿಶ್ ಮಾಡಿದ ಬಳಿಕ ಚಿನ್ನ ಎಗರಿಸಿಕೊಂಡು ಪರಾರಿಯಾಗಿದ್ದಾರೆ.








