ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಗೆ WHATSAPP ನಲ್ಲಿ ಬಂದ INDIAN STOCKS RELIANCE SECURITIES ನಲ್ಲಿ “ಆನ್‌ಲೈನ್ ಟ್ರೇಡಿಂಗ್” ಮಾಡಿ “ದುಪ್ಪಟ್ಟು ಹಣ” ಗಳಿಸುವ ಮೆಸೆಜ್ ನ್ನು ನಂಬಿ ₹3,27,00,000/- ರೂಗಳನ್ನು ಕಳೆದುಕೊಂಡಿರುತ್ತಾರೆ. ಇದರ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಿನಾಂಕ:26/11/2025 ರಂದು ಪ್ರಕರಣ ದಾಖಲಾಗಿದೆ.
ಈ ರೀತಿಯ ವಂಚನೆಗಳು ಹೇಗೆ ನಡೆಯುತ್ತವೆ:
ಇನ್‌ಸ್ಟಾಗ್ರಾಂ, ಟೆಲಿಗ್ರಾಮ್ ಅಥವಾ ವಾಟ್ಸ್ಆಪ್ ನಲ್ಲಿ “ತ್ವರಿತ ಲಾಭ”, “ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ” ಎಂಬ ಸುಳ್ಳು ಜಾಹೀರಾತುಗಳು ಬರುತ್ತವೆ.
ಅವರು ಸುಳ್ಳು ವೆಬ್‌ಸೈಟ್‌ಗಳು ಅಥವಾ ಟ್ರೇಡಿಂಗ್ ಆ್ಯಪ್‌ಗಳನ್ನು ತೋರಿಸಿ, ಮೊದಲು ಸಣ್ಣ ಲಾಭ ತೋರಿಸಿ ವಿಶ್ವಾಸ ಗಳಿಸುತ್ತಾರೆ.
ನಂತರ ಹೆಚ್ಚು ಹಣ ಹೂಡಲು ಹೇಳಿ, ಹಣ ಕಳುಹಿಸಿದ ಬಳಿಕ ಸಂಪರ್ಕ ಕಳೆದುಹೋಗುತ್ತದೆ.
ಕೈಗೊಳ್ಳ ಬೇಕಾದ ಎಚ್ಚರಿಕೆ:
“ತ್ವರಿತ ಲಾಭ” ಅಥವಾ “ದುಪ್ಪಟ್ಟು ಹಣ” ಎಂದು ಹೇಳುವ ಯಾರನ್ನೂ ನಂಬಬೇಡಿ.
ಅಧಿಕೃತ SEBI-ನೋಂದಾಯಿತ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಹೂಡಿಕೆ ಮಾಡಿ.
ಸಾಮಾಜಿಕ ಜಾಲತಾಣಗಳಲ್ಲಿ ಬಂದ ಜಾಹೀರಾತುಗಳು, ಖಾಸಗಿ ಸಂದೇಶಗಳು – ಇವುಗಳನ್ನೆಲ್ಲಾ ಶಂಕೆಯಿಂದಲೇ ನೋಡಿ.
ಈ ರೀತಿಯ ಘಟನೆ ನಡೆದಿದ್ದರೆ ತಕ್ಷಣ ಮಾಡಬೇಕಾದ ಕ್ರಮಗಳು:
1. ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ದೂರು ಸಲ್ಲಿಸಿ:
https://cybercrime.gov.in
2. ರಾಷ್ಟ್ರೀಯ ಹೆಲ್ಪಲೈನ್ ಸಂಖ್ಯೆ: 1930 ಗೆ ಕರೆ ಮಾಡಿ.
3. ಹತ್ತಿರದ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ.








