Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯರು ತಮ್ಮ ‘ಚಿನ್ನ’ವನ್ನ ಪ್ರತಿ ಮನೆ ಮನೆಗೆ ಹಂಚಿದ್ರೆ ನಿಮಗೆಷ್ಟು ಸಿಗುತ್ತೆ ಗೊತ್ತಾ.?

10/02/2026 10:02 PM

ಒಂದು ಕಿಲೋ ತೂಕ ಇಳಿಸಿಕೊಳ್ಳಲು ನೀವೆಷ್ಟು ಹೆಜ್ಜೆ ನಡೆಯ್ಬೇಕು ಗೊತ್ತಾ.? ಈ ಲೆಕ್ಕಾಚಾರ ತಿಳಿದ್ರೆ, ನೀವೇ ಶಾಕ್ ಆಗ್ತೀರಾ!

10/02/2026 9:51 PM

BREAKING: ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಓರ್ವ ಮಹಿಳೆ ಸೇರಿ 8 ವಿದೇಶಿ ಪ್ರಜೆಗಳು ವಶಕ್ಕೆ

10/02/2026 9:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮದ್ಯ ಪ್ರಿಯರೇ ಗಮನಿಸಿ : ಇಂದು, ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ಮದ್ಯ ಮಾರಾಟ’ ನಿಷೇಧ!
KARNATAKA

ಮದ್ಯ ಪ್ರಿಯರೇ ಗಮನಿಸಿ : ಇಂದು, ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ಮದ್ಯ ಮಾರಾಟ’ ನಿಷೇಧ!

By kannadanewsnow5714/09/2024 5:56 AM

ಬೆಂಗಳೂರು: 2024ನೇ ಸಾಲಿನ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಮೆರವಣಿಯ ಹಿನ್ನಲೆಯಲ್ಲಿ ದಿನಾಂಕ 14-09-2024ರ ಇಂದು ಹಾಗೂ ದಿನಾಂಕ 15-09-2024ರ ನಾಳೆ ಕೆಲ ಏರಿಯಾಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶಿಸಿದ್ದಾರೆ.

ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 2024ನೇ ಸಾಲಿನ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆಯ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನದ ಅಮಲಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಮಾಡಬಹುದಾದ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ, ಪೂರ್ವ ಮತ್ತು ಈಶಾನ್ಯ ವಿಭಾಗಗಳ ಕೆಲವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿ, ಬಾರ್‌ & ರೆಸ್ಟೋರೆಂಟ್‌ ಮತ್ತು ವೈನ್ ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಉತ್ತರ, ಪೂರ್ವ ಮತ್ತು ಈಶಾನ್ಯ ವಿಭಾಗಗಳ ಉಪ ಪೊಲೀಸ್ ಆಯುಕ್ತರುಗಳು ಉಲ್ಲೇಖಿತ ಪತ್ರಗಳಲ್ಲಿ ಪ್ರತ್ಯೇಕವಾಗಿ ಮನವಿಯನ್ನು ಸಲ್ಲಿಸಿರುತ್ತಾರೆ ಎಂದು ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ನಾನು ಸ್ವತಃ ಪರಿಶೀಲಿಸಲಾಗಿ ಹಾಗೂ ಗುಪ್ತವಾರ್ತಾ ವಿಭಾಗದಿಂದ ಸಂಗ್ರಹಿಸಿದ ಮಾಹಿತಿಯಿಂದ ಸಾಕಷ್ಟು ಸತ್ಯಾಂಶವಿದೆ ಎಂದು ತಿಳಿದುಬಂದಿರುತ್ತದೆ. 2024ನೇ ಸಾಲಿನ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟಾಗದಂತೆ ಅಹಿತಕರ ಘಟನೆಗಳನ್ನು ತಡೆಯುವ ಅವಶ್ಯಕತೆ ಇರುವುದರಿಂದ ಈ ಕೆಳಕಂಡ ವಿಭಾಗಗಳ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಅವುಗಳ ಮುಂದೆ ನಮೂದಿಸಲಾದ ದಿನಾಂಕಗಳು ಮತ್ತು ಸಮಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವುದು ಸೂಕ್ತವೆಂದು ಮನಗಂಡಿರುತ್ತೇನೆ. ದಿನಾಂಕ: 06-09-2024 ರಂದು ಹೊರಡಿಸಿದ್ದ ಆದೇಶವನ್ನು ಮಾರ್ಪಾಡಿಸಿ ಈ ಕೆಳಕಂಡಂತೆ ಪರಿಷ್ಕತ ಆದೇಶವನ್ನು
ಹೊರಡಿಸಲಾಗಿದೆ ಎಂದಿದ್ದಾರೆ.

ಈ ದಿಸೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ. 163 ರ ಉಪ ಕಲಂ (1) ಮತ್ತು (3) ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಿ.ದಯಾನಂದ, ಭಾ.ಪೊ.ಸೇ. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ, ನಾನು ಬೆಂಗಳೂರು ನಗರ ಪೊಲೀಸ್‌ ಕಮೀಷನರೇಟ್ ವ್ಯಾಪ್ತಿಯ ಈ ಕೆಳಕಂಡ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅವುಗಳ ಮುಂದೆ ನಮೂದಿಸಲಾದ ದಿನಾಂಕಗಳು ಮತ್ತು ಸಮಯದಲ್ಲಿ CL-4 & CL6A ಪರವಾನಗಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಬಾರ್ & ರೆಸ್ಟೋರೆಂಟ್‌ಗಳು, ವೈನ್ ಶಾಪ್‌ಗಳು, ಪಬ್‌ಗಳು, ಎಂ.ಎಸ್.ಐ.ಎಲ್. ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ಮಾಡದಿರಲು ನಿಷೇಧಾಜ್ಞೆಯನ್ನು ವಿಧಿಸಿರುತ್ತೇನೆ. ( ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸೇವೆಗಳಿಗೆ ಮಾತ್ರ ಏನಾಯಿತಿ ನೀಡಲಾಗಿರುತ್ತದೆ) ಎಂದು ಹೇಳಿದ್ದಾರೆ.

ಈ ಏರಿಯಾಗಳಲ್ಲಿ ಇಂದು, ನಾಳೆ ಎಣ್ಣೆ ಸಿಗಲ್ಲ

ಬೆಂಗಳೂರು ಉತ್ತರ ವಿಭಾಗ – ಜೆಸಿ ನಗರ, ಆರ್ ಟಿ ನಗರ, ಹೆಬ್ಬಾಳ, ಸಂಜಯನಗರ ವ್ಯಾಪ್ತಿಯಲ್ಲಿ ದಿನಾಂಕ 14-09-2024ರಂದು ಬೆಳಿಗ್ಗೆ 6 ರಿಂದ ದಿನಾಂಕ 15-09-2024ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಬೆಂಗಳೂರು ಪೂರ್ವ ವಿಭಾಗ – ಡಿಜೆ ಹಳ್ಳಿ, ಭಾರತಿ ನಗರ, ಪುಲಕೇಶಿನಗರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ ಹಾಗೂ ಹಲಸೂರು ವ್ಯಾಪ್ತಿಯಲ್ಲಿ ದಿನಾಂಕ 15-09-2024ರಂದು ಬೆಳಿಗ್ಗೆ 6 ರಿಂದ ದಿನಾಂಕ 16-09-24ರ ಬೆಳಿಗ್ಗೆ 6 ಗಂಟೆಯವರೆಗೆ ಎಣ್ಣೆ ಮಾರಾಟ ಬಂದ್ ಮಾಡಲು ಆದೇಶಿಸಲಾಗಿದೆ.
ಬೆಂಗಳೂರು ಈಶಾನ್ಯ ವಿಭಾಗ – ಯಲಹಂಕ ಉಪನಗರ, ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ದಿನಾಂಕ 15-09-2024ರಂದು ಬೆಳಿಗ್ಗೆ 6 ಗಂಟೆಯಿಂದ ದಿನಾಂಕ 16-09-2024ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Alcohol lovers: 'Sale of liquor' banned in these areas of Bengaluru today and tomorrow! ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ಮದ್ಯ ಮಾರಾಟ’ ನಿಷೇಧ! ಮದ್ಯ ಪ್ರಿಯರೇ ಗಮನಿಸಿ : ಇಂದು
Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಓರ್ವ ಮಹಿಳೆ ಸೇರಿ 8 ವಿದೇಶಿ ಪ್ರಜೆಗಳು ವಶಕ್ಕೆ

10/02/2026 9:33 PM1 Min Read

‘ಕೇಳಚಂದ್ರ ಫೌಂಡೇಷನ್‌’ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ ವಿತರಿಸಿದ ಸುಜಾ ಕೆ.ಜೆ ಜಾರ್ಜ್’

10/02/2026 8:51 PM2 Mins Read

BREAKING: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ: ಬಿಕ್ಲು ಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

10/02/2026 8:46 PM1 Min Read
Recent News

ಭಾರತೀಯರು ತಮ್ಮ ‘ಚಿನ್ನ’ವನ್ನ ಪ್ರತಿ ಮನೆ ಮನೆಗೆ ಹಂಚಿದ್ರೆ ನಿಮಗೆಷ್ಟು ಸಿಗುತ್ತೆ ಗೊತ್ತಾ.?

10/02/2026 10:02 PM

ಒಂದು ಕಿಲೋ ತೂಕ ಇಳಿಸಿಕೊಳ್ಳಲು ನೀವೆಷ್ಟು ಹೆಜ್ಜೆ ನಡೆಯ್ಬೇಕು ಗೊತ್ತಾ.? ಈ ಲೆಕ್ಕಾಚಾರ ತಿಳಿದ್ರೆ, ನೀವೇ ಶಾಕ್ ಆಗ್ತೀರಾ!

10/02/2026 9:51 PM

BREAKING: ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಓರ್ವ ಮಹಿಳೆ ಸೇರಿ 8 ವಿದೇಶಿ ಪ್ರಜೆಗಳು ವಶಕ್ಕೆ

10/02/2026 9:33 PM

128 ವರ್ಷಗಳಷ್ಟು ಹಳೆಯದಾದ ರಾಜಮನೆತನದ ಮೆನು ವೈರಲ್: 1897ರಲ್ಲಿ ಮಹಾರಾಜ ಊಟ ಹೇಗಿತ್ತು ಗೊತ್ತಾ?

10/02/2026 9:21 PM
State News
KARNATAKA

BREAKING: ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಓರ್ವ ಮಹಿಳೆ ಸೇರಿ 8 ವಿದೇಶಿ ಪ್ರಜೆಗಳು ವಶಕ್ಕೆ

By kannadanewsnow0910/02/2026 9:33 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಂತ ಓರ್ವ ಮಹಿಳೆ ಸೇರಿದಂತೆ ಒಟ್ಟು 8 ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ…

‘ಕೇಳಚಂದ್ರ ಫೌಂಡೇಷನ್‌’ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ‘ಪ್ರಮಾಣ ಪತ್ರ ವಿತರಿಸಿದ ಸುಜಾ ಕೆ.ಜೆ ಜಾರ್ಜ್’

10/02/2026 8:51 PM

BREAKING: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ: ಬಿಕ್ಲು ಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

10/02/2026 8:46 PM

ಫೆ.14ರಂದ ಬೆಂಗಳೂರಿನಲ್ಲಿ ಭೀಮಣ್ಣ ಖಂಡ್ರೆ ನುಡಿನಮನ: ಸಚಿವ ಈಶ್ವರ ಖಂಡ್ರೆ

10/02/2026 8:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.