ಹೈದರಾಬಾದ್ : ನಗರದ ಮಾದಣ್ಣಪೇಟೆಯ ಮೊಯಿನಾಗ್ ಎಂಬಲ್ಲಿ ಶುಕ್ರವಾರ ಸಿನಿಮೀಯ ರೀತಿಯ ಘಟನೆಯೊಂದು ನಡೆದಿದ್ದು, ವಧುವಿನ ಕೊರಳಿಗೆ ತಾಳಿ ಕಟ್ಟಿದ್ಮೇಲೆ ಮೊದಲ ಪತ್ನಿ ಪೊಲೀಸರೊಂದಿಗೆ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ.
ಹೌದು, ಶುಕ್ರವಾರ ರಾತ್ರಿ ತನ್ನ ಮದುವೆಯ ನಂತ್ರ ಆರತಕ್ಷತೆ ಆಯೋಜಿಸಿದ್ದ ವರನೊಬ್ಬ ತನ್ನ ಹೆಂಡತಿಯನ್ನ ನೋಡಿದ ನಂತ್ರ ತನ್ನ ನವ ವಧುವನ್ನ ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾನೆ. ಮಾದಣ್ಣಪೇಟೆಯ ಮೊಯಿನಾಗ್ ಎಂಬಲ್ಲಿ ಶುಕ್ರವಾರ ಸಂಜೆ ಸೈಯದ್ ನಜೀರ್ ಎರಡನೇ ಮದುವೆಯಾಗಿದ್ದು, ಅವನ ಮೊದಲ ಹೆಂಡತಿ ಪೊಲೀಸರೊಂದಿಗೆ ಆರತಕ್ಷತೆಗೆ ಬಂದಳು. ಅಘಾತಕಾರಿಯೆಂದ್ರೆ, ಸೈಯದ್ ತನ್ನ ಮೊದಲ ಪತ್ನಿ ಡಾ. ಸನಾ ಸಮ್ರೀನ್ʼಗೆ ತನ್ನ ಎರಡನೇ ಮದುವೆಯ ಬಗ್ಗೆ ತಿಳಿಸಿರಲಿಲ್ಲ.
ಪೊಲೀಸ್ ಅಧಿಕಾರಿಗಳೊಂದಿಗೆ ಸನಾಳನ್ನ ನೋಡಿದ ಕೂಡಲೇ ಗಾಬರಿಗೊಂಡ ಸೈಯದ್, ಸ್ವಾಗತ ಸ್ಥಳದ ಹಿಂದಿನ ಪ್ರವೇಶ ದ್ವಾರದಿಂದ ತಪ್ಪಿಸಿಕೊಂಡಿದ್ದಾನೆ. ತನ್ನ ಒಪ್ಪಿಗೆಯಿಲ್ಲದೇ ತನ್ನ ಪತಿ ಮದುವೆಯಾಗುತ್ತಿದ್ದಾನೆ ಎನ್ನುವ ಸಂಗತಿ ತಿಳಿದು, ತನ್ನ ಸಹೋದರ ಅಬ್ದುಲ್ ವಹೀದ್ ಮತ್ತು ಸಂತೋಷನಗರ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾಳೆ.
ಸಮ್ರೀನ್ ಸಹೋದರ ಅಬ್ದುಲ್ ಹೇಳುವಂತೆ, “ನನ್ನ ಸಹೋದರಿ ಸೈಯದ್ 2019ರಲ್ಲಿ ನ್ಯೂಜಿಲೆಂಡ್ನಿಂದ ಬಂದ ಕೂಡಲೇ ಸೈಯದ್ನನ್ನ ವಿವಾಹವಾದಳು. ಕೋವಿಡ್-19 ಲಾಕ್ಡೌನ್ ಸಮಯದಲ್ಲಿ, ಅವ್ರು ಇಲ್ಲಿ ಸಿಲುಕಿಕೊಂಡಿದ್ದರು ಮತ್ತು ನಾವು ಅವರ ವೆಚ್ಚಗಳನ್ನ ನೋಡಿಕೊಂಡಿದ್ದೇವೆ. ಆದಾಗ್ಯೂ, ಆತ 15 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟ, ಅದನ್ನ ನಾವು ಪಾವತಿಸಲು ಸಾಧ್ಯವಾಗಲಿಲ್ಲ. ನಂತ್ರ ಆತ ನನ್ನ ಸಹೋದರಿಯಿಂದ ದೂರವಿರಲು ಪ್ರಾರಂಭಿಸಿದ” ಎಂದು ಅವರು ಹೇಳಿದರು.
ಹಣಕ್ಕಾಗಿ ಕಿರುಕುಳ ನೀಡಲು ಪ್ರಾರಂಭಿಸಿದ ನಂತ್ರ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಸನಾ ಹೇಳಿದ್ದಾರೆ. “ನಾನೊಬ್ಬ ಡಾಕ್ಟರ್. ಕೋವಿಡ್ -19ರ ಎರಡನೇ ಅಲೆಯ ಸಮಯದಲ್ಲಿ, ನಾನು ಕೋವಿಡ್ ಪಾಸಿಟಿವ್ ಆಗಿದ್ದ ಸೈಯದ್ ಅವರ ಚಿಕ್ಕಪ್ಪನಿಗೆ ಸೇವೆ ಸಲ್ಲಿಸಿದೆ ಮತ್ತು ಲಾಕ್ಡೌನ್ ಸಮಯದಲ್ಲಿ ನನ್ನ ಹೆಚ್ಚಿನ ಉಳಿತಾಯವನ್ನ ಆತನಿಗೆ ನೀಡಿದೆ” ಎಂದಿದ್ದಾರೆ. ನೊಂದ ಮಹಿಳೆ ಈಗ ಸಂತೋಷ್ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ, ಆದಾಗ್ಯೂ ನಜೀರ್ ಎಲ್ಲಿದ್ದಾನೆ ಎಂಬುದರ ಬಗ್ಗೆ ಪೊಲೀಸರಿಗೆ ಇನ್ನೂ ಖಚಿತತೆ ಇಲ್ಲ.