ನವದೆಹಲಿ: ಅಕ್ಷಯ್ ಕುಮಾರ್ ಮತ್ತೊಮ್ಮೆ ಮನರಂಜನಾ ಉದ್ಯಮದಿಂದ ಅತಿ ಹೆಚ್ಚು ತೆರಿಗೆದಾರರಾಗಿ ಗುರುತಿಸಿಕೊಂಡಿದ್ದಾರೆ. ಈ ನಡುವೆ ಅವರಿಗೆ ಆದಾಯ ತೆರಿಗೆ ಇಲಾಖೆಯು ನಟನಿಗೆ ಸಮ್ಮಾನ್ ಪಾತ್ರಾ, ಗೌರವ ಪ್ರಮಾಣಪತ್ರವನ್ನು ನೀಡಿದೆ. ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಕಳೆದ ಐದು ವರ್ಷಗಳಿಂದ ಅತಿ ಹೆಚ್ಚು ತೆರಿಗೆ ಪಾವತಿಸುವವರ ಪಟ್ಟವನ್ನು ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಕ್ಷಯ್ ಕುಮಾರ್ ಪ್ರಸ್ತುತ ಯುಕೆಯಲ್ಲಿ ಚಿತ್ರೀಕರಣದಲ್ಲಿರುವುದರಿಂದ, ಅವರ ತಂಡವು ಅವರ ಪರವಾಗಿ ಆದಾಯ ತೆರಿಗೆ ಇಲಾಖೆಯಿಂದ ಗೌರವ ಪ್ರಮಾಣಪತ್ರವನ್ನು ಸ್ವೀಕರಿಸಿದೆಅಕ್ಷಯ್ ಕುಮಾರ್ ಅವರ ಗೌರವ ಪ್ರಮಾಣಪತ್ರವು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.