ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಸಮಾಜವಾದಿ ಪಕ್ಷದ (ಎಸ್ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರು ಭಾರತ್ ಜೋಕೋ ಯಾತ್ರೆಗೆ ಕಾಂಗ್ರೆಸ್ ಆಹ್ವಾನ ಬಂದಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ಆಹ್ವಾನ ಬಂದಿಲ್ಲ, ನಮ್ಮ ಸಿದ್ಧಾಂತ ವಿಭಿನ್ನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದು ಅಖಿಲೇಶ್ ಹೇಳಿದ್ದಾರೆ.
ನಮ್ಮ ಭಾವನೆಗಳು ಅವರ ಯಾತ್ರೆಯೊಂದಿಗಿವೆ ಎಂದ ಅವರು, ನನಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ಭಾರತ ಜೋಡೊ ಯಾತ್ರೆ ಜನವರಿ 3 ರಂದು ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ. ಈ ಪ್ರಯಾಣವು ಗಾಜಿಯಾಬಾದ್ ಲೋನಿಯಿಂದ ಪ್ರಾರಂಭವಾಗಿ ವಿವಿಧ ನಗರಗಳ ಮೂಲಕ ಚಲಿಸಲಿದೆ.
ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ ಅವರನ್ನು ಆಹ್ವಾನಿಸಲಾಗಿದೆ. ಜಯಂತ್ ಚೌಧರಿ ಈ ಹಿಂದೆ ಈ ಪ್ರಯಾಣಕ್ಕೆ ಸೇರಲು ನಿರಾಕರಿಸಿದ್ದರು.
2022 ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಪ್ರತ್ಯೇಕವಾಗಿ ಸ್ಪರ್ಧಿಸಿದವು. ಹಲವು ಸಂದರ್ಭಗಳಲ್ಲಿ ಅಖಿಲೇಶ್ ಯಾದವ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆ ಚುನಾವಣೆ ಸಂದರ್ಭದಲ್ಲಿ ಎರಡು ಪಕ್ಷಗಳ ನಡುವಿನ ಅಂರತ ಮತ್ತಷ್ಟು ಹೆಚ್ಚಿಸಿತು.
BIGG NEWS : ಕಳಸದಲ್ಲಿ ವ್ಯಕ್ತಿಯನ್ನು ತಿವಿದು ಸಾಯಿಸಿದ ಕಾಡುಕೋಣ : ಬೆಚ್ಚಿಬಿದ್ದ ಕಾಫಿನಾಡು ಮಂದಿ
ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗ್ತಾರೆ : ನಳೀನ್ ಕುಮಾರ್ ಕಟೀಲ್ ವಾಗ್ಧಾಳಿ