ಬೆಳಗಾವಿ : ಡಾ. ಬಿ ಆರ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮವನ್ನು ಸ್ವೀಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಕಾಂಗ್ರೆಸ್ ಮಾಜಿ ಶಾಸಕ ಅಜ್ಜಂಪಿರ್ ಖಾದ್ರಿ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದು ಅಜ್ಜಂಪೀರ್ ಖಾದ್ರಿ ಒಬ್ಬ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಬಗ್ಗೆ ಅಜ್ಜಂಪೀರ್ ಖಾದ್ರಿ ಸರಿಯಾಗಿ ಅಧ್ಯಯನ ಮಾಡಿಲ್ಲ. ಆತನೊಬ್ಬ ನಾಲಾಯಕ್. ಅಂಬೇಡ್ಕರ್ ಅವರಿಗೆ ಹೈದರಾಬಾದ್ ನಿಜಾಮ ಆಸೆ ಹುಟ್ಟಿಸಿದ್ದ. ನೀವು ಇಸ್ಲಾಂ ಧರ್ಮಕ್ಕೆ ಸೇರಿದರೆ ಅರ್ಧ ಆಸ್ತಿ ಕೊಡುತ್ತೇನೆ ಅಂತ ಹೇಳಿದ್ದ.
ನನ್ನ ಕುಟುಂಬದ ಉದ್ಧಾರಕ್ಕಾಗಿ ಇಂತಹ ಹೇಸಿಗೆ ಕೆಲಸ ಮಾಡಲ್ಲ. ನಾನು ಇಸ್ಲಾಂ ಧರ್ಮಕ್ಕೆ ಸೇರಿದರು ಮತ್ತೆ ನನ್ನನ್ನು ದಲಿತರ ಹಾಗೆ ಕಾಣುತ್ತಾರೆ. ಅದಕ್ಕೆ ಇಸ್ಲಾಂ ಧರ್ಮಕ್ಕೆ ಸೇರಲ್ಲ ಅಂತ ಅಂಬೇಡ್ಕರ್ ಅವರು ಹೇಳಿದರು. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಭಾರತದಲ್ಲಿ ಬಂದು ಇಸ್ಲಾಂ ಸೇರಿದರೆ ದೇಶ ರಾಷ್ಟ್ರಾಂತರ ಆಗುತ್ತದೆ. ಇಂದು ಮುಸ್ಲಿಂ ಜಗಳ ಆಗುತ್ತೆ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಬೌದ್ಧ ಧರ್ಮ ಭಾರತದಲ್ಲಿ ಜನ್ಮ ತಾಳಿದ ಧರ್ಮ. ಬೌದ್ಧ ಧರ್ಮವನ್ನು ಡಾಕ್ಟರ್ ಬಿಆರ್ ಅಂಬೇಡ್ಕರ್ ಸ್ವೀಕಾರ ಮಾಡಿದ್ದರು. ಇಸ್ಲಾಂ ಅನ್ನೋ ಧರ್ಮದಲ್ಲಿ ಸಹೋದರತ್ವ ಇಲ್ಲ. ಇವರು ಭೂಮಿ ಮೇಲೆ ಇರೋವರೆಗೂ ಇಂತಹ ಗದ್ದಲ ಮಾಡುತ್ತಾರೆ.ಭಯೋತ್ಪಾದಕ ಹುಟ್ಟುವ ಕಾರ್ಖಾನೆ ಮಾಡುತ್ತಾರೆಂದು ಬರೆದಿದ್ದಾರೆ. ಪುಸ್ತಕದಲ್ಲಿ ಅಂಬೇಡ್ಕರ್ ಈ ಬಗ್ಗೆ ಬರೆದಿದ್ದಾರೆ. ಕಾಂಗ್ರೆಸಿನ ಯಾರ್ಯಾರು ಅಯೋಗ್ಯರು ಆ ಪುಸ್ತಕ ಓದಿಲ್ಲ ಓದಲಿ ಎಂದು ವಾಗ್ದಾಳಿ ನಡೆಸಿದರು.