ನವದೆಹಲಿ : ಮಧ್ಯರಾತ್ರಿ ಭಾರತೀಯ ಸೈನಿಕರು ಪಾಕಿಸ್ತಾನದ ಉಗ್ರರ ಕ್ಯಾಂಪ್ ಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ಒಂದು ಕ್ಷಿಪಣಿ ದಾಳಿಗೆ 100ಕ್ಕೂ ಹೆಚ್ಚು ಉಗ್ರರು ಸಾವನಪ್ಪಿದ್ದಾರೆ. ಇನ್ನು ಭಾರತೀಯ ಸೈನಿಕರ ಈ ಒಂದು ಕಾರ್ಯಕ್ಕೆ ಭಾರತ ದೇಶದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ.
ಇನ್ನು ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ್ದರ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಪಾಕಿಸ್ತಾನ ಸೇನೆಗೆ ಪ್ರತಿ ದಾಳಿ ನಡೆಸಲು ಪರಮಾಧಿಕಾರ ನೀಡಿದ್ದಾರೆ. ಪ್ರಧಾನಿ ಮೋದಿ ಭಾರತೀಯ ಸೈನಿಕರಿಗೆ ಯಾವ ರೀತಿ ಸ್ವತಂತ್ರ ನೀಡಿದ್ದರೂ ಅದೇ ರೀತಿ ಪಾಕಿಸ್ತಾನದ ಪ್ರಧಾನಿ ಪಾರ್ಕ್ ಸೈನಿಕರಿಗೆ ಫ್ರೀ ಹ್ಯಾಂಡ್ ನೀಡಿದ್ದಾರೆ.
ಈ ವಿಚಾರವಾಗಿ, ಭಾರತದ ಮೇಲೆ ಪ್ರತಿ ದಾಳಿ ನಡೆಸಿದರೆ ಆಪರೇಷನ್ ಸಿಂಧೂರ್ ವಿಸ್ತರಣೆ ಮಾಡಲಾಗುತ್ತದೆ.ಒಂದು ವೇಳೆ ಪ್ರತಿ ದಾಳಿ ಏನಾದರು ಮಾಡಿದ್ರೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಮತ್ತೆ ದಾಳಿ ನಡೆಸಲಾಗುತ್ತದೆ ಎಂದು ಪಾಕಿಸ್ತಾನಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಕುರಿತು ಎಚ್ಚರಿಕೆ ನೀಡಿದ್ದಾರೆ.