ಎನ್ ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ತೊಂದರೆಯೋ, ಅವಸರದ ಕೆಲವೂ ಗೊತ್ತಿಲ್ಲ, ಕೆಲವು ವಿವಿಯಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿ, ಹಾಲ್ ಟಿಕೆಟ್ ನಲ್ಲಿ ಹಲವು ತಪ್ಪುಗಳು ಕಾಣಸಿಗುತ್ತದೆ. ಇದೀಗ ಉನ್ನತ ಪದವಿ ವಿದ್ಯಾರ್ಥಿನಿಯ ಪರೀಕ್ಷಾ ಪ್ರವೇಶ ಪತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಫೋಟೋ ಪ್ರಿಂಟ್ ಆಗಿದ್ದು, ವಿದ್ಯಾರ್ಥಿನಿ ಒಂದು ಕ್ಷಣ ದಂಗಾಗಿದ್ದಾರೆ.
ಬಿಹಾರದ ಕೊಯಲಾಂಚಲ್ ವಿಶ್ವವಿದ್ಯಾನಿಲಯದ ಕಾಜಲ್ ಕುಮಾರಿ ಎಂಬುವವರು ಉನ್ನತ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಪರೀಕ್ಷೆ ಹಿನ್ನೆಲೆ ಹಾಲ್ ಟಿಕೆಟ್ ತರಲು ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದರು. ವಿವಿಯವರು ನೀಡಿದ ಪರೀಕ್ಷಾ ಪ್ರವೇಶಪತ್ರ ನೋಡಿ ವಿದ್ಯಾರ್ಥಿನಿ ಶಾಕ್ಗೆ ಒಳಗಾಗಿದ್ದಾರೆ.
ಈ ಕುರಿತು ವಿವಿ ಕುಲಪತಿ ಎಸ್ಕೆ ಬಾರನ್ವಾಲ್ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿನಿ ನೀಡಿದ ಮಾಹಿತಿ ಆಧರಿಸಿ ನಾವು ಅಡ್ಮಿಟ್ ಕಾರ್ಡ್ ನೀಡಿದ್ದೇವೆ. ತಾಂತ್ರಿಕ ದೋಷದಿಂದ ಈ ರೀತಿ ಆಗಿರಬಹುದು’ ಎಂದು ತಿಳಿಸಿದ್ದಾರೆ. ಪ್ರವೇಶ ಪತ್ರದಲ್ಲಿ ಫೋಟೋಗಳು ಮತ್ತು ಸಹಿಗಳನ್ನು ಅಪ್ಲೋಡ್ ಮಾಡುವುದು ವಿಶ್ವವಿದ್ಯಾಲಯದಿಂದ ಮಾಡಲಾಗಿಲ್ಲ ಎಂದು ಬರನ್ವಾಲ್ ಹೇಳಿದರು. ಇದು ವಿಶ್ವವಿದ್ಯಾಲಯದ ವರ್ಚಸ್ಸಿಗೆ ಮಸಿ ಬಳಿಯುವ ಪಿತೂರಿಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.
ಫಾರ್ಮ್ ಅನ್ನು ಭರ್ತಿ ಮಾಡುವಾಗ, ಎಲ್ಲವನ್ನೂ ಸರಿಯಾಗಿ ಭರ್ತಿ ಮಾಡಲಾಗಿದೆ ಆದರೆ ಆನ್ಲೈನ್ನಲ್ಲಿ ತನ್ನ ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿದೆ ಆಗ ನಟಿಯ ಚಿತ್ರವನ್ನು ಅದಕ್ಕೆ ಲಗತ್ತಿಸಿರುವುದು ಗೊತ್ತಾಗಿದೆ. ಈ ವಿಚಾರ ಗೊತ್ತಾಗಿ ನನಗೆ ದಾಗ ಶಾಕ್ ಆಗಿದೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಸದ್ಯ, ಈ ಹಾಲ್ ಟಿಕೆಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆಗೆ ಆಗ್ರಹ ವ್ಯಕ್ತವಾಗುತ್ತಿದೆ.
.