ಬೆಂಗಳೂರು: ಹಲವರಿಗೆ ಚಿನ್ನ ವಂಚನೆ ಪ್ರಕರಣದ ಐಶ್ವರ್ಯ ಗೌಡ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಕೇಸಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಕಾರು ಚಾಲಕನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಐಶ್ವರ್ಯ ಗೌಡ ಚಿನ್ನ ವಂಚನೆ ಕೇಸ್ ಸಂಬಂಧ ಎಸಿಪಿ ಭರತ್ ರೆಡ್ಡಿ ಅವರ ಕಾರು ಚಾಲಕ ವೀರೇಶ್ ದಳವಾಯಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಐಶ್ವರ್ಯ ಗೌಡಗೆ ಸೇರಿದ್ದಂತ ಕಾರು ವಿನಯ್ ಕುಲಕರ್ಣಿ ಮನೆಯಲ್ಲಿ ಪತ್ತೆಯಾಗಿದ್ದರಿಂದ ಕಾರು ಚಾಲಕ ವೀರೇಶ್ ದಳವಾಯಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಅಂದಹಾಗೇ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಐಶ್ವರ್ಯ ಗೌಡ ಅವರ ಪರಿಚಯವಿತ್ತು. ಮಹಾರಾಷ್ಟ್ರಕ್ಕೆ ಹೋಗುವಾಗ ವಿನಯ್ ಕುಲಕರ್ಣಿ ಮನೆಗೆ ಐಶ್ವರ್ಯ ಗೌಡ ಬಂದಿದ್ದರು. ವಾಪಾಸ್ ಹೋಗುವಾಗ ಕಾರು ಬಿಟ್ಟು ವಿಮಾನದಲ್ಲಿ ಹೋಗಿದ್ದರು. ಅವರ ಬೆನ್ಜ್ ಕಾರು ವಿನಯ್ ಕುಲಕರ್ಣಿ ಮನೆ ಬಳಿಯೇ ಇತ್ತು ಎಂಬುದಾಗಿ ತಿಳಿದು ಬಂದಿದೆ.
ಸಾಗರದಲ್ಲಿ ‘ಅಸಮರ್ಪಕ ವಿದ್ಯುತ್ ಪೂರೈಕೆ’ ವಿರುದ್ಧ ಸಿಡಿದೆದ್ದ ‘ಬಿಜೆಪಿ’: ನಾಳೆ ‘ಮೆಸ್ಕಾಂ ಕಚೇರಿ’ ಮುಂದೆ ಪ್ರತಿಭಟನೆ
BIG NEWS : ದೇಶಾದ್ಯಂತ `ತಾಪಮಾನ’ ಹೆಚ್ಚಳ : ಹೃದಯ, ಶ್ವಾಸಕೋಶ, ಮೆದುಳಿಗೆ ಹಾನಿಕಾರಕ.!