ಉತ್ತರ ಗ್ರೀಸ್; ಉತ್ತರ ಗ್ರೀಸ್ನ ಪ್ಯಾಲಿಯೊಚೋರಿ ಕವಾಲಾಸ್ ಬಳಿ ಪ್ರಯಾಣಿಸುತ್ತಿದ್ದ ದೊಡ್ಡ ಸರಕು ವಿಮಾನವೊಂದರಲ್ಲಿ ಜ್ವಾಲೆ ಕಾಣಿಸಿಕೊಂಡ ಪರಿಣಾಮ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಈ ಆಂಟೊನೊವ್ ಎಎನ್-12 ವಿಮಾನವು ಎಂಟು ಜನರೊಂದಿಗೆ ಅಪಾಯಕಾರಿ ಸರಕನ್ನು ಹೊತ್ತು ಸರ್ಬಿಯಾದಿಂದ ಜೋರ್ಡಾನ್ಗೆ ಹೊರಟಿತ್ತು. ತಾಂತ್ರಿಕ ದೋಷದ ಪರಿಣಾಮ ಹತ್ತಿರದ ಕವಾಲಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಅನುಮತಿ ಕೋರಿತ್ತು. ಆದ್ರೆ, ಗಮ್ಯಸ್ಥಾನ ತಲುಪುವಷ್ಟರಲ್ಲೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಭೂಮಿಗೆ ಅಪ್ಪಳಿಸಿ ಪತನಗೊಂಡಿದೆ.
ಪ್ರತ್ಯಕ್ಷದರ್ಶಿಗಳು, ಆಂಟೊನೊವ್ ಎಎನ್-12 ವಿಮಾನವು ಬೆಂಕಿಗಾವುತಿಯಾಗಿ ನೆಲಕ್ಕಪ್ಪಳಿಸಿದ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
🔴#BREAKING : Il filmato del momento in cui l’aereo #Antonov ucraino si è schiantato a Paleochori Kavalas, nel nord della #Grecia. Il pilota aveva richiesto un atterraggio di emergenza dopo che 3 motori si sono guastati. pic.twitter.com/ZnGAJsQxYO
— WORLDWIDENEWS24 (@Ucrainarussia) July 16, 2022
ಅಪಘಾತದ ಸ್ಥಳಕ್ಕೆ ಏಳು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಆದರೆ, ಸ್ಫೋಟಕ್ಕೆ ಕಾರಣ ಏನು ಎಂದು ತಿಳಿದುಬಂದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
Breaking news: ಮಣಿಪುರದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲು| Earthquake Hits Manipur
Big news: 2025ರ ವೇಳೆಗೆ ಕರ್ನಾಟಕ ಮಲೇರಿಯಾ ಮುಕ್ತ ರಾಜ್ಯವಾಗಲಿದೆ: ಆರೋಗ್ಯ ಸಚಿವ ಸುಧಾಕರ್