ನವದೆಹಲಿ : ಏರ್ ಮಾರ್ಷಲ್ ಎ.ಪಿ.ಸಿಂಗ್ ಅವರನ್ನ ಮುಂದಿನ ವಾಯುಪಡೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಅವರು ಭಾರತೀಯ ವಾಯುಪಡೆಯ (IAF) ಉಪಾಧ್ಯಕ್ಷರಾಗಿದ್ದು, ಹಾಲಿ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದಾರೆ.
ಈ ಕುರಿತು ರಕ್ಷಣಾ ಸಚಿವಾಲಯದ ಹೇಳಿಕೆ ಬಿಡುಗಡೆ ಮಾಡಿದ್ದು, “ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರನ್ನು ಸೆಪ್ಟೆಂಬರ್ 30, 2024ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಏರ್ ಚೀಫ್ ಮಾರ್ಷಲ್ ಶ್ರೇಣಿಯಲ್ಲಿ ಮುಂದಿನ ವಾಯುಪಡೆಯ ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸಿದೆ” ಎಂದು ಶನಿವಾರ ತಿಳಿಸಿದೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಏರ್ ಮಾರ್ಷಲ್ ಸಿಂಗ್ ಅವರನ್ನ ಡಿಸೆಂಬರ್ 21, 1984ರಂದು ಐಎಎಫ್’ನ ಫೈಟರ್ ಸ್ಟ್ರೀಮ್’ಗೆ ನಿಯೋಜಿಸಲಾಯಿತು. ಅವರು ಅರ್ಹ ಫ್ಲೈಯಿಂಗ್ ಬೋಧಕ ಮತ್ತು ಪ್ರಾಯೋಗಿಕ ಪರೀಕ್ಷಾ ಪೈಲಟ್ ಆಗಿದ್ದು, ವಿವಿಧ ಸ್ಥಿರ ಮತ್ತು ರೋಟರಿ ವಿಂಗ್ ವಿಮಾನಗಳಲ್ಲಿ 5000 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವವನ್ನ ಹೊಂದಿದ್ದಾರೆ.
WATCH VIDEO : ಪೋಷಕರೇ ಎಚ್ಚರ, ನಿಮ್ಮ ಮಕ್ಕಳಿಗೆ ‘ಕ್ಯಾಡ್ಬರಿ ಚಾಕೊಲೇಟ್’ ಕೊಡಿಸುವ ಮುನ್ನ ಈ ಸ್ಟೋರಿ ಓದಿ!
“ಪಾಕ್ ಪ್ರಧಾನಿ ಮೋದಿಗೆ ಹೆದರುತ್ತಿದೆ, ಹೀಗಾಗಿ ಜಮ್ಮು-ಕಾಶ್ಮೀರ ಗಡಿಯಲ್ಲಿ ಶಾಂತಿ ನೆಲೆಸಿದೆ’ : ಅಮಿತ್ ಶಾ
‘ರೈತ’ರ ಮಕ್ಕಳಿಗೆ ಗುಡ್ ನ್ಯೂಸ್: ‘ಕೃಷಿ ಡಿಪ್ಲೋಮಾ’ಗೆ ಅರ್ಜಿ ಆಹ್ವಾನ, ಶೇ.50ರಷ್ಟು ಮೀಸಲಾತಿ