ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಮಧ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾವು ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಇದ್ದೇವೆ ಎಂದು ಬೆಂಬಲ ಸೂಚಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಫ್ ಐ ಆರ್ ದಾಖಲಾದ ಮೇಲೆ ಸಿಎಂ ಬೆನ್ನಿಗೆ ಹೈಕಮಾಂಡ್ ನಿಲ್ಲುತ್ತಾ ಎಂಬ ಮಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಸಿಎಂ ಸಿದ್ದರಾಮಯ್ಯಗೆ ಬೆಂಬಲ ಕೊಟ್ಟಿದ್ದೇವೆ. ಏಕೆಂದರೆ ಸಿದ್ದರಾಮಯ್ಯ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆ. ವೈಯಕ್ತಿಕವಾಗಿ ಅಲ್ಲ ಅಂದು ಇನ್ನು ದಲಿತ ನಾಯಕ ದಲಿತ ಫಂಡ್ ಬಗ್ಗೆ ನರೇಂದ್ರ ಮೋದಿ ಮಾತನಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಒಂದು ವಿಷಯದ ಕುರಿತಾಗಿ ಪ್ರಧಾನಿ ಮೋದಿ ಅವರಿಗೆ ಹರಿಯಾಣದಲ್ಲಿ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
ಸಿಬಿಐ ಅವಕಾಶವನ್ನು ಹಿಂಪಡೆಯುವುದು ಸರ್ಕಾರಕ್ಕೆ ಇರುವ ಅಧಿಕಾರ. ನಾನು ಗೃಹ ಮಂತ್ರಿ ಇದ್ದಾಗ ವೀರಪ್ಪನ್ ಕೇಸ್ ರೆಫರ್ ಮಾಡಿದ್ದೆ ಎಂದು ಸಂಪುಟದ ನಿರ್ಧಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ದೇವರಾಜು ಅರಸು ಇದ್ದಾಗಲೂ ಸಿಬಿಐ ಅವಕಾಶವನ್ನು ಹಿಂಪಡೆಯಲಾಗಿತ್ತು. ಸರ್ಕಾರ ಈ ಒಂದು ನಿರ್ಧಾರ ತೆಗೆದುಕೊಂಡಿರುವುದು ಸಾಮಾನ್ಯ. ಸಿಬಿಐ ತನಿಖೆಯ ಅಧಿಕಾರ ಹಿಂಪಡೆಯುವುದು ಸರ್ಕಾರಕ್ಕೆ ಇರುವ ಅಧಿಕಾರವಾಗಿದೆ ಎಂದು ತಿಳಿಸಿದರು.