ನವದೆಹಲಿ; ಕಾಂಗ್ರೆಸ್ ಪಕ್ಷದಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಎಐಸಿಸಿಯಿಂದ ವಿವಿಧ ರಾಜ್ಯಗಳಿಗೆ ನೂತನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶಿಸಲಾಗಿದೆ. ಕರ್ನಾಟಕದ ಹಲವರಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ಈ ಕುರಿತಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬರ್ ಎಐಸಿಸಿ ಕಾರ್ಯದರ್ಶಿಯಾಗಿ ಗಣೇಶ್ ಕುಮಾರ್ ಯಾದವ್, ಜಂಟಿ ಕಾರ್ಯದರ್ಶಿಯಾಗಿ ಡಾ.ಪಾಲಕ್ ವರ್ಮಾ ನೇಮಕ ಮಾಡಲಾಗಿದೆ.
ಕರ್ನಾಟಕಕ್ಕೆ ಎಐಸಿಸಿ ಕಾರ್ಯದರ್ಶಿಯಾಗಿ ರೋಜಿ ಎಂ ಜಾನ್, ಮಯೂರ ಎಸ್ ಜಯಕುಮಾರ್, ಅಭಿಷೇಕ್ ದತ್ ಹಾಗೂ ಪಿ ಗೋಪಿ ಅವರನ್ನು ನೇಮಕ ಮಾಡಲಾಗಿದೆ. ಕೇರಳ ಮತ್ತು ಲಕ್ಷದ್ವೀಪಕ್ಕೆ ಪಿವಿ ಮೋಹನ್, ವಿಕೆ ಅರಿವಜಗನ್ ಹಾಗೂ ಮನಸೂರ್ ಆಲಿ ಖಾನ್ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಗೋವಾ, ದಾದರ್ ಮತ್ತು ನಾಗರ್ ಹಾವೇಲಿ, ದಾಮನ್ ಮತ್ತು ಡಿಯೂಗೆ ಕಾರ್ಯದರ್ಶಿಯನ್ನಾಗಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ನೇಮಿಸಿದೆ. ತಮಿಳುನಾಡು ಹಾಗೂ ಪಾಂಡಿಚೇರಿ ಕಾರ್ಯದರ್ಶಿಯನ್ನಾಗಿ ಸೂರಜ್ ಹೆಗಡೆ ಅವರನ್ನು ನೇಮಿಸಿ ಆದೇಶಿಸಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಎಂಬ ಹೆಸರು ಬದಲಾವಣೆಯಿಂದ ಉದ್ಯೋಗ ಸೃಷ್ಟಿ ಹೆಚ್ಚಳ: ಡಿಸಿಎಂ ಡಿ.ಕೆ. ಶಿವಕುಮಾರ್
ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ಸೆ.14ರವರೆಗೆ ಶೇ.5ರ ರಿಯಾಯಿತಿ ವಿಸ್ತರಣೆ
ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays