ಬೀಜಿಂಗ್:ಕೃತಕ ಬುದ್ಧಿಮತ್ತೆ ಅಥವಾ AI ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಜಗತ್ತಿನ ಕೋಟ್ಯಂತರ ಉದ್ಯೋಗಿಗಳಿಗೆ ಚೀನಾದ ನ್ಯಾಯಾಲಯವೊಂದು ಭರವಸೆಯ ತೀರ್ಪನ್ನು ನೀಡಿದೆ. “AI ಬಾಟ್‌ಗಳು ಮನುಷ್ಯರಿಗೆ ಬದಲಿಯಾಗಲು ಸಾಧ್ಯವಿಲ್ಲ” ಎಂದು ಹೇಳಿರುವ ನ್ಯಾಯಾಲಯ, ಕೇವಲ AI ಬಳಕೆಯ ನೆಪವೊಡ್ಡಿ ನೌಕರರನ್ನು ಕೆಲಸದಿಂದ ವಜಾ ಮಾಡುವುದು ಕಾನೂನುಬಾಹಿರ ಎಂದು ಆದೇಶಿಸಿದೆ.
ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಯನ್ನು ವಜಾಗೊಳಿಸಿ, ಆತನ ಕೆಲಸವನ್ನು AI ಬಾಟ್‌ಗಳು ನಿಭಾಯಿಸಬಲ್ಲವು ಎಂದು ವಾದಿಸಿತ್ತು. ಇದನ್ನು ಪ್ರಶ್ನಿಸಿ ನೌಕರ ನ್ಯಾಯಾಲಯದ ಮೆಟ್ಟಿಲೇರಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು:
AI ಎಷ್ಟೇ ಮುಂದುವರಿದಿದ್ದರೂ ಅದು ಮನುಷ್ಯನ ವಿವೇಚನೆ, ಸೃಜನಶೀಲತೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಗೆ ಸಮನಾಗಲು ಸಾಧ್ಯವಿಲ್ಲ.ಕಂಪನಿಯು ತನ್ನ ಲಾಭಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದೇ ಹೊರತು, ಕಾರ್ಮಿಕರ ಹಕ್ಕುಗಳನ್ನು ಕಸಿಯಲು ಬಳಸಬಾರದು ಎಂದು ಹೇಳಿದೆ.ಅಂತಿಮವಾಗಿ, ವಜಾಗೊಂಡ ನೌಕರನಿಗೆ ಭಾರೀ ಮೊತ್ತದ ಪರಿಹಾರ ನೀಡುವಂತೆ ಕಂಪನಿಗೆ ಸೂಚಿಸಿದೆ.
ಭಾರತದಲ್ಲಿ ಇಂತಹ ಕಾನೂನು ಜಾರಿಯಾಗಬಹುದೇ?
ಚೀನಾದ ಈ ತೀರ್ಪು ಈಗ ಭಾರತದಲ್ಲೂ ದೊಡ್ಡ ಚರ್ಚೆಗೆ ಕಾರಣವಾಗಿದೆ. ಭಾರತದ ಸನ್ನಿವೇಶ ಹೇಗಿದೆ ಎಂಬುದನ್ನು ನೋಡುವುದಾದರೆ:
ಪ್ರಸ್ತುತ ಕಾನೂನು: ಭಾರತದಲ್ಲಿ ಇನ್ನೂ AI ಗೆ ಸಂಬಂಧಿಸಿದಂತೆ ನಿರ್ದಿಷ್ಟ ‘ಕಾರ್ಮಿಕ ಕಾನೂನುಗಳು’ ರಚನೆಯಾಗಿಲ್ಲ. ಪ್ರಸ್ತುತ ಇರುವ ಕೈಗಾರಿಕಾ ವಿವಾದಗಳ ಕಾಯ್ದೆಯಡಿ ನೌಕರರನ್ನು ವಜಾ ಮಾಡಲು ಬಲವಾದ ಕಾರಣಗಳಿರಬೇಕು.








