ಉಜ್ಜಯಿನಿ: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಪತ್ನಿ ಆಲಿಯಾ ಭಟ್ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಭೇಟಿಗೆಂದು ಬಂದಿದ್ದರು. ಆದ್ರೆ, ದೇವಸ್ಥಾನಕ್ಕೆ ಭೇಟಿ ನೀಡದೇ ವಾಪಸ್ ಆಗಿದ್ದಾರೆ.
ಹೌದು, ರಣಬೀರ್ ದಂಪತಿಯೊಂದಿಗೆ ʻಬ್ರಹ್ಮಾಸ್ತ್ರʼ ಚಿತ್ರದ ರ್ದೇಶಕ ಅಯಾನ್ ಮುಖರ್ಜಿ ಕೂಡ ಅವರೊಂದಿಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಆಶಯದೊಂದಿಗೆ ಉಜ್ಜಯಿನಿಗೆ ಬಂದಿದ್ದರು. ಆದ್ರೆ, ಅವರ ಭೇಟಿಗೆ ಮುನ್ನ ಬಲಪಂಥೀಯ ಗುಂಪುಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸದಸ್ಯರು ಇಂದು ಉಜ್ಜಯಿನಿಯಲ್ಲಿ ಭಾರೀ ಗದ್ದಲವನ್ನು ಸೃಷ್ಟಿಸಿದ್ದಾರೆ.
ಭೇಟಿಗೂ ಮುನ್ನ, ಬಲಪಂಥೀಯ ಕಾರ್ಯಕರ್ತರು ಮುಖ್ಯ ದ್ವಾರ ಮತ್ತು ವಿವಿಐಪಿಗಳಿಗೆ ಕಪ್ಪು ಬಾವುಟ ತೋರಿಸಲು ಶಂಖ ದ್ವಾರದಲ್ಲಿ ಜಮಾಯಿಸಿದರು. ಗುಂಪನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು.
Ahead Of Alia Bhatt, Ranbir Kapoor’s Visit, Ruckus Outside Mahakal temple in Ujjain @ndtv @ndtvindia pic.twitter.com/JCwmDdPJkY
— Anurag Dwary (@Anurag_Dwary) September 6, 2022
उज्जैन : फिल्म ब्रह्मास्त्र के लिए महाकाल का आशीर्वाद मांगने पहुंचे रणबीर और आलिया भट्ट का हिंदू संगठनों ने किया विरोध
◆पुलिस ने बजरंग दल कार्यकर्ताओं को खदेड़ा#Brahmastra @JournalistVipin pic.twitter.com/p2SF5FIAm2
— News24 (@news24tvchannel) September 6, 2022
“ನಾವು ನಾವು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ” ಎಂದು ಆಲಿಯಾ ಭಟ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಆದ್ರೆ, ಅದು ಸಾಧ್ಯವಾಗಿಲ್ಲ.
ಆಲಿಯಾ ಭಟ್ ಗರ್ಭಿಣಿಯಾಗಿರುವುದರಿಂದ ಗಲಾಟೆಯ ನಡುವೆ ದೇವಸ್ಥಾನಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದರ್ಶನವಿಲ್ಲದೆ ಇಂದೋರ್ಗೆ ಮರಳಿದರು. ಇಲ್ಲಿಂದ ಮುಂಬೈಗೆ ವಿಮಾನದಲ್ಲಿ ತೆರಳಲಿದ್ದಾರೆ ಎಂದು ಉಜ್ಜಯಿನಿಯ ಕಲೆಕ್ಟರ್ ಆಶಿಶ್ ಸಿಂಗ್ ಹೇಳಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಅಯಾನ್ ಮುಖರ್ಜಿ ಮಾತ್ರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು ಎಂದು ಆಶಿಶ್ ಸಿಂಗ್ ಹೇಳಿದ್ದಾರೆ.
View this post on Instagram
ಬಾಲಿವುಡ್ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ʻಬ್ರಹ್ಮಾಸ್ತ್ರʼ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ.
BIGG NEWS: ಇಂದು ಸಂಜೆ 5 ಗಂಟೆಗೆ ಐಟಿ-ಬಿಟಿ ಕಂಪನಿಗಳ ಜೊತೆ ಅಶ್ವತ್ಥ್ ನಾರಾಯಣ ಸಭೆ
ʻಭಾರತ್ ಜೋಡೋ ಯಾತ್ರೆʼ: 150 ದಿನ ʻರಾಹುಲ್ ಗಾಂಧಿʼಗೆ ಕಂಟೇನರ್ನಲ್ಲೇ ಮಲಗಲು ಸಿದ್ಧತೆ!… ಏನಿದರ ವಿಶೇಷತೆ?