Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಶ್ವದ ಟಾಪ್ 10 ಬ್ಯಾಂಕುಗಳಿಗಿಂತಲೂ ಭಾರತೀಯರ ಮನೆಯಲ್ಲೇ ಇದೆ ಅತಿ ಹೆಚ್ಚು ಚಿನ್ನ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

10/04/2026 7:15 PM

ಕಲಿಯುವಿಕೆಗೆ ವಯಸ್ಸಿಲ್ಲ ಅಡ್ಡಿ: ಮಂಗಳೂರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ-ಮಗಳ ಪಾಸ್!

10/04/2026 7:01 PM

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಹೊಸ ಗೇಮ್ ಪ್ಲಾನ್: ಇನ್ನು ಮುಂದೆ ಶಿಪ್ಪಿಂಗ್ ಸುಂಕಕ್ಕೆ ‘ಕ್ರಿಪ್ಟೋ’ ಪಾವತಿ ಕಡ್ಡಾಯ !

10/04/2026 6:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಲಿಯುವಿಕೆಗೆ ವಯಸ್ಸಿಲ್ಲ ಅಡ್ಡಿ: ಮಂಗಳೂರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ-ಮಗಳ ಪಾಸ್!
KARNATAKA

ಕಲಿಯುವಿಕೆಗೆ ವಯಸ್ಸಿಲ್ಲ ಅಡ್ಡಿ: ಮಂಗಳೂರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ-ಮಗಳ ಪಾಸ್!

By kannadanewsnow0910/04/2026 7:01 PM

ದಕ್ಷಿಣ ಕನ್ನಡ: “ಸಾಧಿಸುವ ಛಲವಿದ್ದರೆ ಸಾಧನೆಗೆ ವಯಸ್ಸು ಅಡ್ಡಿಯಾಗದು” ಎಂಬ ಮಾತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌ನಲ್ಲಿ ನಡೆದ ಈ ಅಪರೂಪದ ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ತಾಯಿ ಮತ್ತು ಮಗಳು ಏಕಕಾಲಕ್ಕೆ ಉತ್ತೀರ್ಣರಾಗುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದಾರೆ.

ಹಳೆಯ ಕನಸು ನನಸು ಮಾಡಿದ ಗೃಹಿಣಿ

ಬಿ.ಸಿ. ರೋಡ್ ಕೈಕಂಬ ನಿವಾಸಿಯಾಗಿರುವ ನೇತ್ರಾವತಿ ವಿ.ಆರ್. ಅವರು ವೃತ್ತಿಯಲ್ಲಿ ಗೃಹಿಣಿ. ಸಂಸಾರದ ಜವಾಬ್ದಾರಿಗಳ ನಡುವೆಯೂ ಶಿಕ್ಷಣ ಮುಂದುವರಿಸಬೇಕೆಂಬ ಹಳೆಯ ಕನಸನ್ನು ಅವರು ಕೈಬಿಟ್ಟಿರಲಿಲ್ಲ. ಈ ಬಾರಿ ಕಲಾ ವಿಭಾಗದಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಎದುರಿಸಿದ್ದ ನೇತ್ರಾವತಿ ಅವರು ಮೊದಲ ಪ್ರಯತ್ನದಲ್ಲೇ 257 ಅಂಕಗಳನ್ನು ಗಳಿಸಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ತಾಯಿಯ ಹಾದಿಯಲ್ಲಿ ಮಗಳ ಭರ್ಜರಿ ಯಶಸ್ಸು

ಒಂದೆಡೆ ತಾಯಿ ಪರೀಕ್ಷೆಯಲ್ಲಿ ಗೆದ್ದರೆ, ಮಗಳು ಹೇಮಶ್ರೀ ಆರ್. ಅವರು ತಾಯಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಭರ್ಜರಿ ಸಾಧನೆ ಮಾಡಿದ್ದಾರೆ. ಬಿ.ಮೂಡದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹೇಮಶ್ರೀ, ಕಲಾ ವಿಭಾಗದಲ್ಲಿ 562 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿ ಕಿರ್ತಿ ತಂದಿದ್ದಾರೆ.

ಶಿಕ್ಷಕ ತಂದೆಯ ಹೆಮ್ಮೆ

ನೇತ್ರಾವತಿ ಅವರ ಪತಿ ಮತ್ತು ಹೇಮಶ್ರೀ ಅವರ ತಂದೆಯಾಗಿರುವ ರವಿಕುಮಾರ್ ಅವರು ನಂದಾವರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೆಯಲ್ಲೇ ಒಬ್ಬರು ಶಿಕ್ಷಕರಾಗಿರುವುದರಿಂದ ಪತ್ನಿ ಮತ್ತು ಮಗಳ ಈ ಶೈಕ್ಷಣಿಕ ಸಾಧನೆಗೆ ಅವರು ಬೆನ್ನೆಲುಬಾಗಿ ನಿಂತಿದ್ದರು. “ಪತ್ನಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ನನಗೆ ಅತೀವ ಸಂತೋಷ ತಂದಿದೆ,” ಎಂದು ರವಿಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ತಾಯಿ-ಮಗಳ ಅಪರೂಪದ ಜೋಡಿ ಈಗ ಕರಾವಳಿ ಭಾಗದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಉನ್ನತ ಶಿಕ್ಷಣ ಪಡೆಯಬಯಸುವ ಅನೇಕ ಮಹಿಳೆಯರಿಗೆ ನೇತ್ರಾವತಿ ಅವರ ಸಾಧನೆ ಸ್ಫೂರ್ತಿಯಾಗಿದೆ.

BREAKING: ಕೆಇಎಯಿಂದ ಕರ್ನಾಟಕ ‘KCET-2026ರ ಪರೀಕ್ಷೆ’ಗೆ ಪ್ರವೇಶ ಪತ್ರ ಬಿಡುಗಡೆ; ಹೀಗೆ ಡೌನ್ ಲೋಡ್ ಮಾಡಿ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿ: ಕೆಇಎಯಿಂದ ಓಎಂಆರ್ ಶೀಟ್ ವೆಬ್ ಸೈಟ್ ಗೆ ಅಪ್‌ಲೋಡ್

Share. Facebook Twitter LinkedIn WhatsApp Email

Related Posts

BREAKING: ಕೆಇಎಯಿಂದ ಕರ್ನಾಟಕ ‘KCET-2026ರ ಪರೀಕ್ಷೆ’ಗೆ ಪ್ರವೇಶ ಪತ್ರ ಬಿಡುಗಡೆ; ಹೀಗೆ ಡೌನ್ ಲೋಡ್ ಮಾಡಿ

10/04/2026 6:41 PM2 Mins Read

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿ: ಕೆಇಎಯಿಂದ ಓಎಂಆರ್ ಶೀಟ್ ವೆಬ್ ಸೈಟ್ ಗೆ ಅಪ್‌ಲೋಡ್

10/04/2026 6:31 PM1 Min Read

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ರದ್ದು

10/04/2026 5:54 PM1 Min Read
Recent News

ವಿಶ್ವದ ಟಾಪ್ 10 ಬ್ಯಾಂಕುಗಳಿಗಿಂತಲೂ ಭಾರತೀಯರ ಮನೆಯಲ್ಲೇ ಇದೆ ಅತಿ ಹೆಚ್ಚು ಚಿನ್ನ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

10/04/2026 7:15 PM

ಕಲಿಯುವಿಕೆಗೆ ವಯಸ್ಸಿಲ್ಲ ಅಡ್ಡಿ: ಮಂಗಳೂರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ-ಮಗಳ ಪಾಸ್!

10/04/2026 7:01 PM

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಹೊಸ ಗೇಮ್ ಪ್ಲಾನ್: ಇನ್ನು ಮುಂದೆ ಶಿಪ್ಪಿಂಗ್ ಸುಂಕಕ್ಕೆ ‘ಕ್ರಿಪ್ಟೋ’ ಪಾವತಿ ಕಡ್ಡಾಯ !

10/04/2026 6:58 PM

ಶಾಂತಿ ಸಂಧಾನಕ್ಕೆ ಪಾಕ್ ಸಚಿವನೇ ವಿಲನ್: ಇಸ್ರೇಲ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಾಕಿ ಡಿಲೀಟ್ ಮಾಡಿದ ರಕ್ಷಣಾ ಸಚಿವ !

10/04/2026 6:46 PM
State News
KARNATAKA

ಕಲಿಯುವಿಕೆಗೆ ವಯಸ್ಸಿಲ್ಲ ಅಡ್ಡಿ: ಮಂಗಳೂರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ-ಮಗಳ ಪಾಸ್!

By kannadanewsnow0910/04/2026 7:01 PM KARNATAKA 1 Min Read

ದಕ್ಷಿಣ ಕನ್ನಡ: “ಸಾಧಿಸುವ ಛಲವಿದ್ದರೆ ಸಾಧನೆಗೆ ವಯಸ್ಸು ಅಡ್ಡಿಯಾಗದು” ಎಂಬ ಮಾತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌ನಲ್ಲಿ ನಡೆದ…

BREAKING: ಕೆಇಎಯಿಂದ ಕರ್ನಾಟಕ ‘KCET-2026ರ ಪರೀಕ್ಷೆ’ಗೆ ಪ್ರವೇಶ ಪತ್ರ ಬಿಡುಗಡೆ; ಹೀಗೆ ಡೌನ್ ಲೋಡ್ ಮಾಡಿ

10/04/2026 6:41 PM

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿ: ಕೆಇಎಯಿಂದ ಓಎಂಆರ್ ಶೀಟ್ ವೆಬ್ ಸೈಟ್ ಗೆ ಅಪ್‌ಲೋಡ್

10/04/2026 6:31 PM

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ರದ್ದು

10/04/2026 5:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.