ವಿಜಯಪುರ: ಸಿದ್ಧೇಶ್ವರ ಶ್ರೀಗಳು ನಿಧನಾನಂತ್ರ ಅಗ್ನಿಸ್ಪರ್ಷದ ಮೂಲಕ ಶವಸಂಸ್ಕಾರಕ್ಕೆ ಕೋರಿಕೊಂಡಿದ್ದಾರೆ. ಇದರ ಅರ್ಥ ಅವರು ಸಾವಿನ ನಂತ್ರವೂ ಈ ಪಂಚಭೂತಗಳಲ್ಲಿ ಲೀನರಾಗಿ, ಗಾಳಿಯಲ್ಲಿ ಸಿದ್ದೇಶ್ವರ ಶ್ರೀಗಳು ಇರಲಿದ್ದಾರೆ. ಸ್ವಾಮಿ ವಿವೇಕಾನಂದ ನಂತ್ರ, ನನ್ನ ಮೇಲೆ ಪ್ರಭಾವ ಬೀರಿದ್ದು ಸಿದ್ದೇಶ್ವರ ಶ್ರೀಗಳು ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಸಿದ್ದೇಶ್ವರ ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನದ ಬಳಿಕ ಮಾತನಾಡಿದಂತ ಅವರು, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಂತೆ ಬದುಕಿದವರು ಮತ್ತಾರೂ ಇಲ್ಲ. ಎಲ್ಲರಿಗೂ ಮಾದರಿಯಾಗುವಂತ ನಡೆ ಅವರದ್ದಾಗಿದೆ. ಅವರು ಯಾವತ್ತೂ ಯಾವುದಕ್ಕೂ ಆಸೆ ಪಡಲಿಲ್ಲ ಎಂದರು.
ಸಿದ್ದೇಶ್ವರ ಶ್ರೀಗಳು ತಮ್ಮ ನಿಧನಾನಂತ್ರ ಯಾವುದೇ ಸ್ಮಾರಕವನ್ನು ನಿರ್ಮಿಸದಂತೆ ತಿಳಿಸಿದ್ದಾರೆ. ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಷ ಮಾಡುವ ಮೂಲಕ ಅಂತ್ಯ ಸಂಸ್ಕಾರವನ್ನು ಮಾಡುವಂತೆ ಹೇಳಿದ್ದರು. ಹೀಗೆ ಮಾಡುವುದರಿಂದ ಅವರು ಈ ಗಾಳಿಯಲ್ಲಿ ಲೀನರಾಗಿ ಅದನ್ನು ಸೇವಿಸಿದಂತ ಎಲ್ಲರಲ್ಲಿಯೂ ಅವರಿರುತ್ತಾರೆ ಎಂದು ಹೇಳಿದರು.
ಸಿದ್ದೇಶ್ವರ ಶ್ರೀಗಳು ಅಂತ್ಯವಾಗಿಲ್ಲ. ಎಲ್ಲಿಯವರೆಗೆ ಈ ಭೂಮಂಡಲ, ನಿಸರ್ಗ, ಈ ಸೂರ್ಯ, ಚಂದ್ರರು ಇರುತ್ತಾರೋ ಅಲ್ಲಿಯವರೆಗೂ ಅವರು ಈ ಭಕ್ತಸಾಗರದ ಶರೀರದಲ್ಲಿ ಇರುತ್ತಾರೆ. ಅವರನ್ನು ಪಡೆದುಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಇರುತ್ತದೆ ಎಂದರು.
ಶ್ರೀಗಳು ಬಹಳ ದೊಡ್ಡ ಸಾಧಕರು. ಸ್ವಾಮಿ ವಿವೇಕಾನಂದ ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತ್ರವೂ ಅವರ ಸಾಧನೆಗಳಿರುತ್ತದೆ ಎನ್ನೋ ಹಾಗೇ, ಸಿದ್ದೇಶ್ವರ ಶ್ರೀಗಳು ಈ ಭಕ್ತ ಸಾಗರದ ಮಧ್ಯೆ ಇದ್ದಾರೆ. ವಿವೇಕಾನಂದರ ಬಳಿಕ, ನನ್ನ ಮೇಲೆ ಪ್ರಭಾವ ಬೀರಿದ್ದೇ ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.
ಇಂದು ಸಂಜೆ 5.15ಕ್ಕೆ ಶ್ರೀಗಳಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಗುತ್ತದೆ. ಈ ಬಳಿಕ ನಂತ್ರವೂ 2-3 ಗಂಟೆ ಅಂತಿಮ ದರ್ಶನಕ್ಕೆ ಭಕ್ತಾಧಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಶಾಂತಿಯುತವಾಗಿ ಅಂತಿಮ ದರ್ಶನ ಪಡೆಯುವಂತೆ ಮನವಿ ಮಾಡಿದರು.
ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿಲ್ಲ. ಎಲ್ಲರೂ ಸೈನಿಕ ಶಾಲೆಯ ಆವರಣದಲ್ಲಿಯೇ ಅಂತಿಮ ದರ್ಶನವನ್ನು ಪಡೆಯುವಂತೆ ಕೋರಿಕೊಂಡರು.
BIGG NEWS: ಸಿದ್ದೇಶ್ವರ ಶ್ರೀಗಳು ಅಸ್ತಂಗತ:ನಿಡಗುಂದಿ ಪಟ್ಟಣ ಬಂದ್; ಸ್ವಾಮೀಜಿ ಭಾವಪೂರ್ಣ ಶ್ರದ್ಧಾಂಜಲಿ
Siddeshwara Swamiji: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ: ಕಿಲೋ ಮೀಟರ್ ಗಟ್ಟಲೇ ಕ್ಯೂ
BIGG NEWS: ಸಿದ್ದೇಶ್ವರ ಸ್ವಾಮೀಜಿ ತಂಗುತ್ತಿದ್ದ ತಪೋವನದಲ್ಲಿ ನಿರವಮೌನ