ಡೆಹ್ರಾಡೂನ್ : ಚಳಿಗಾಲ ಆರಂಭವಾದ ಹಿನ್ನೆಲೆಯಲ್ಲಿ ದೇಶದ ಪ್ರಖ್ಯಾತ ತೀರ್ಥ ಕ್ಷೇತ್ರಗಳಾದ ಕೇದಾರನಾಥ ಹಾಗೂ ಯಮುನೋತ್ರಿ ದೇಗುಲಗಳ ಬಾಗಿಲು ಬಂದ್ ಮಾಡಲಾಗಿದೆ. ಉತ್ತರಾಖಂಡ ರಾಜ್ಯದ ಹಿಮಾಲಯ ಗಿರಿ ಶಿಖರಗಳ ವ್ಯಾಪ್ತಿಯಲ್ಲಿ ಬರುವ ಈ ಎರಡೂ ಪುಣ್ಯ ಕ್ಷೇತ್ರಗಳಲ್ಲಿ ಈಗಾಗಲೇ ಹಿಮದ ಅಬ್ಬರ ಶುರುವಾಗಿದೆ.
BREAKING NEWS: ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್ ಕತ್ತರಿಗೆ ಒಪ್ಪಿಗೆ
ಗುರುವಾರ ಬೆಳಗ್ಗೆ 8.30ಕ್ಕೆ ದೇಗುಲಗಳ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮಂತ್ರಗಳ ಪಠಣ ಮಾಡಿ ಮುಚ್ಚಲಾಯ್ತು ಎಂದು ಬದರಿನಾಥ ಕೇದಾರನಾಥ ದೇಗುಲ ಸಮಿತಿಯು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ.
ಚಳಿಗಾಲದ ವೇಳೆ ಬಾಗಿಲು ಬಂದ್ ಮಾಡುವ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಹಾಗೂ ಭಗವಂತನ ದರ್ಶನ ಪಡೆಯಲು ಸರಿ ಸುಮಾರು 3 ಸಾವಿರಕ್ಕೂ ಹೆಚ್ಚು ಭಕ್ತರು ಈ ಪುಣ್ಯ ಕ್ಷೇತ್ರದಲ್ಲಿ ಸೇರಿದ್ದರು. ದೇಗುಲ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್, ತೀರ್ಥ ಪುರೋಹಿತ್ ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರುದ್ರ ಪ್ರಯಾಗ ಜಿಲ್ಲೆಯ ಜಿಲ್ಲಾಡಳಿತ ಕೂಡಾ ಈ ಸಂದರ್ಭದಲ್ಲಿ ಹಾಜರಿತ್ತು. ಭಾರತೀಯ ಸೇನೆಯ 1ನೇ ಮರಾಠಾ ರೆಜಿಮೆಂಟ್ ಸಿಬ್ಬಂದಿ ಈ ವೇಳೆ ಭಕ್ತಿ ಗೀತೆಯ ಸಂಗೀತ ನುಡಿಸಿದರು.
BREAKING NEWS: ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್ ಕತ್ತರಿಗೆ ಒಪ್ಪಿಗೆ
ಚಾರ್ಧಾಮ್ ಯಾತ್ರೆಯಲ್ಲಿ ಈ ವರ್ಷ ಒಟ್ಟು 43 ಲಕ್ಷ ಯಾತ್ರಾರ್ಥಿಗಳು ಭಾಗಿಯಾಗಿದ್ದರು. ಕೇದಾರನಾಥ ದೇಗುಲವೊಂದಕ್ಕೇ 15,61,882 ಭಕ್ತಾದಿಗಳು ಭೇಟಿ ನೀಡಿದ್ದರು ಎಂದು ದೇಗುಲ ಆಡಳಿತ ಮಂಡಳಿ ಅಂಕಿ ಅಂಶ ನೀಡಿದೆ.
ಕೇದಾರನಾಥ ದೇಗುಲದ ಗರ್ಭ ಗುಡಿ ಹಾಗೂ ಮುಖ್ಯ ದ್ವಾರವನ್ನು ದೇಗುಲದ ಅರ್ಚಕ ಗಂಗಾಧರ ಅವರು ಮುಚ್ಚಿದರು. ಇದಕ್ಕೂ ಮುನ್ನ ಜ್ಯೋತಿರ್ಲಿಂಗವನ್ನು ಬಗಂಭರ, ಭೃಂಗರಾಜ ಪುಷ್ಪದಿಂದ ಅಲಂಕರಿಸಲಾಯ್ತು. ಭಸ್ಮ ಬಳಿಯಲಾಯ್ತು. ಸ್ಥಳೀಯವಾಗಿ ಲಭ್ಯವಾಗುವ ಒಣ ಹೂಗಳು ಹಾಗೂ ಎಲೆಗಳಿಂದಲೂ ಜ್ಯೋತಿರ್ಲಿಂಗವನ್ನು ಅಲಂಕರಿಸಲಾಯ್ತು. ಇದಾದ ಬಳಿಕ ಪಂಚಮುಖಿ ಡೋಲಿ (ಉತ್ಸವ ಮೂರ್ತಿ) ಹೊರಟಿತು. ಭಗವಾನ್ ಶಂಕರನ ಈ ಡೋಲಿಯು ಕೇದಾರನಾಥದಿಂದ ಉಖಿಮಠಕ್ಕೆ ಸಾಂಪ್ರದಾಯಿಕವಾಗಿ ಪ್ರತಿ ವರ್ಷ ರವಾನೆಯಾಗುತ್ತದೆ. ಬಳಿಕವಷ್ಟೇ ದೇಗುಲದ ಬಾಗಿಲು ಹಾಕಲಾಗುತ್ತದೆ.
BREAKING NEWS: ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್ ಕತ್ತರಿಗೆ ಒಪ್ಪಿಗೆ
ಇದೇ ವೇಳೆ ಉತ್ತರ ಕಾಶಿಯಲ್ಲಿ ಇರುವ ಯಮುನಾದ್ರಿ ಧಾಮದ ಬಾಗಿಲನ್ನೂ ಚಳಿಗಾಲದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ. ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ಬಳಿಕ ಮಧ್ಯಾಹ್ನ 12:09ಕ್ಕೆ ಯಮುನಾದ್ರಿ ದ್ವಾರ ಮುಚ್ಚಲಾಯ್ತು. ಈ ವೇಳೆ 2 ಸಾವಿರಕ್ಕೂ ಹೆಚ್ಚು ಭಕ್ತರು ಪುಣ್ಯ ಕ್ಷೇತ್ರಕ್ಕೆ ಆಗಮಿಸಿದ್ದರು. ಯಮುನಾದ್ರಿ ದ್ವಾರ ಮುಚ್ಚುವ ವೇಳೆ ಉತ್ತರಾಖಂಡದ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನಡೆಯಿತು. ಇದಾದ ಬಳಿಕ ಯಮುನಾ ದೇವಿಯ ಡೋಲಿ ಹೊರಟಿತು. ಈ ಡೋಲಿಯು ಮುಂದಿನ 6 ತಿಂಗಳ ಕಾಲ ಉತ್ತರಾಖಂಡದ ಖರ್ಸಾಲಿ ಗ್ರಾಮದಲ್ಲಿ ಇರುತ್ತದೆ. ಯಮುನಾದ್ರಿ ಬಾಗಿಲು ಮತ್ತೆ ತೆರೆಯುವವರೆಗೂ ಈ ಡೋಲಿಗೆ ಪೂಜೆ ಮಾಡಲಾಗುತ್ತದೆ.
BREAKING NEWS: ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್ ಕತ್ತರಿಗೆ ಒಪ್ಪಿಗೆ
ಈ ವರ್ಷ ಚಾರ್ಧಾಮ್ ಯಾತ್ರೆಗೆ ದಾಖಲೆ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದು ಸಂತಸ ತಂದಿದೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಯಾತ್ರೆಯನ್ನು ಯಶಸ್ವಿಗೊಳಿಸಿದ ಭಕ್ತಾದಿಗಳಿಗೆ ಸಿಎಂ ದನ್ಯವಾದ ಅರ್ಪಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಗೌರಿಕುಂಡದಿಂದ ಕೇದಾರನಾಥಕ್ಕೆ ರೋಪ್ ವೇ ಕಲ್ಪಿಸುವ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದು, ಶೀಘ್ರದಲ್ಲೇ ಈ ರೋಪ್ ವೇ ಭಕ್ತರ ಬಳಕೆಗೆ ಲಭ್ಯವಾಗಲಿದೆ ಎಂದು ಭರವಸೆ ನೀಡಿದ್ಧಾರೆ
BREAKING NEWS: ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್ ಕತ್ತರಿಗೆ ಒಪ್ಪಿಗೆ