ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಳೆಯ ಮನೆಯನ್ನ ನವೀಕರಿಸುವ ದಂಪತಿಗಳ ನಿರ್ಧಾರವು ಅವ್ರ ಜೀವನವನ್ನ ಬದಲಾಯಿಸಿತು. ಅಡಿಗೆ ಮನೆ ಅಗೆಯುವಾಗ, ಅವ್ರು ಒಂದು ಪೆಟ್ಟಿಗೆಯನ್ನ ಕಂಡುಕೊಂಡಿದ್ದು, ಅದರಲ್ಲಿ ನಾಲ್ಕು ನೂರು ವರ್ಷಗಳ ಹಿಂದಿನ 264 ಚಿನ್ನದ ನಾಣ್ಯಗಳು ದೊರೆತಿವೆ. ಇದರ ಬೆಲೆ ಬರೋಬ್ಬರಿ 2.3 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಂದ್ಹಾಗೆ, ಯುಕೆ ಮೂಲದ ದಂಪತಿಗಳು ಸುಮಾರು 10 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಅಂದ್ಹಾಗೆ, ಮನೆಯನ್ನ ನವೀಕರಿಸಲು ಬಯಸಿದ್ದು, ಅಡಿಗೆ ಮನೆ ಅಗೆಯುವಾಗ ಒಂದು ಪೆಟ್ಟಿಗೆ ಕಂಡುಬಂದಿದೆ. ಆ ಪೆಟ್ಟಿಗೆ ತೆರೆದಾಗ, ಅದರಲ್ಲಿ ಹಳೆಯ ಶೈಲಿಯ ಚಿನ್ನದ ನಾಣ್ಯಗಳನ್ನ ಕಂಡುಕೊಂಡರು. ಆ ನಾಣ್ಯಗಳು 18ನೇ ಶತಮಾನದ ಹಿಂದಿನವರು ಎಂದು ತಿಳಿದ ದಂಪತಿಗಳು ಅವುಗಳನ್ನ ಹರಾಜಿನಲ್ಲಿ ಮಾರಾಟ ಮಾಡಲು ನಿರ್ಧರಿಸಿದರು. ಎಲ್ಲರ್ಬಿ ಗ್ರಾಮದ ಈ ಮನೆಯಲ್ಲಿ ನಾಣ್ಯಗಳು ದೊರೆತಿವೆ. ಜೇಮ್ಸ್-1 ಮತ್ತು ಚಾರ್ಲ್ಸ್-1 ಆಳಿದ ಕಾಲದಿಂದ ಬ್ರಿಟನ್ ಪ್ರಾರಂಭವಾಯಿತು ಎಂದು ಸಂಶೋಧಕರು ನಂಬುತ್ತಾರೆ.
ಈ ಎಲ್ಲಾ ನಾಣ್ಯಗಳು 1610 ರಿಂದ 1727 ರವರೆಗಿನವು ಎಂದು ದಂಪತಿಗಳು ಕಂಡುಕೊಂಡರು. ಆ ಕಾಲದ ಪ್ರಮುಖ ಉದ್ಯಮಿಗಳ ಕುಟುಂಬವು ಹಣವನ್ನು ಬಚ್ಚಿಟ್ಟಿರಬಹುದು ಎಂದು ಸಂಶೋಧಕರು ನಂಬಿದ್ದಾರೆ. ದಂಪತಿಗಳು ಅವುಗಳನ್ನು 2.5 ಲಕ್ಷ ಪೌಂಡ್ ಗಳಿಗೆ (ಸುಮಾರು 2.3ಕೋಟಿ ರೂ.) ಮಾರಾಟ ಮಾಡಲು ಸಜ್ಜಾಗಿದ್ದಾರೆ.