ಯಾದಗಿರಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರ ಸಚಿವ ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಬಳಿಕ ಇದೀಗ ರಾಜಗೌಡ ಸುಳ್ಳು ಹೇಳಲು ಕಲಿಸಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ ಮಾಜಿ ಶಾಸಕ ರಾಜುಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ರಾಜುಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ನಾನು ಚೆನ್ನಾಗಿದ್ದೇವೆ ಎಂದು ರಾಜುಗೌಡ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಂಬಲವಿದೆ ಎಂದು ತಿಳಿಸಿದ್ದಾರೆ. ಆದರೆ ನಾನು ರಾಜುಗೌಡ ಚೆನ್ನಾಗಿರುವುದು ನೂರಕ್ಕೆ ನೂರರಷ್ಟು ಸುಳ್ಳು ಎಂದು ತಿಳಿಸಿದರು.
ನನ್ನ ಯಾವುದೇ ಬೆಂಬಲ ನಿನಗಿಲ್ಲ. ನೀನು ಬಿಜೆಪಿ ಅಭ್ಯರ್ಥಿ ನಿನ್ನ ಸೋಲಿಸುವುದೇ ನಮ್ಮ ಗುರಿ. ರಾಜೇಗೌಡ ಸುಳ್ಳು ಹೇಳುವ ವ್ಯಕ್ತಿ ಬಿಜೆಪಿಯವರು ಸುಳ್ಳು ಹೇಳುವ ಫ್ಯಾಕ್ಟರಿ. ಪ್ರಧಾನಿ ಮೋದಿ, ಅಮಿತ್ ಶಾ ಜೆಪಿ ನಡ್ದ ಬಳಿಕ ರಾಜುಗೌಡ ಸುಳ್ಳು ಹೇಳುವುದನ್ನು ಕಲಿಯುತ್ತಿದ್ದಾನೆ ಎಂದು ರಾಜುಗೌಡ ಬ್ರದರ್ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.