ನೋಯ್ಡಾ(ಉತ್ತರ ಪ್ರದೇಶ): ಏಕಾಂತ ಬಯಸುವ ಜೋಡಿಗಳು ಇತ್ತೀಚೆಗೆ ಅತೀ ಹೆಚ್ಚಾಗಿ ಓಯೋ (OYO) ರೂಮ್ಗಳ ಕಡೆ ಮುಖಮಾಡುತ್ತಿದ್ದಾರೆ. ಅಂತಹವರಿಗೊಂದು ಬಿಗ್ ಶಾಕ್ ನೀಡುವ ಘಟನೆಯೊಂದು ಹೊರಬಿದ್ದಿದೆ.
ಹೌದು, ಉತ್ತರ ಪ್ರದೇಶದ OYO ಹೋಟೆಲ್ಗಳ ಕೊಠಡಿಯಲ್ಲಿ ಸೀಕ್ರೆಟ್ ಕ್ಯಾಮೆರಾ ಇಟ್ಟು ದಂಪತಿಗಳು ಏಕಾಂತವಾಗಿರುವ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದಾರೆ. ಈ ಸಂಬಂಧ ಇಬ್ಬರನ್ನು ನೋಯ್ಡಾ ಪೊಲೀಸರು ಬಂಧಿಸಲಾಗಿದೆ ಮತ್ತು OYO ರೂಮ್ಸ್ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹೋಟೆಲ್ ರೂಮ್ಗಳಲ್ಲಿ ಅಳವಡಿಸುತ್ತಿದ್ದ ಈ ಕ್ಯಾಮರಾ ಕೀಚಕರು ಮೂಲತಃ ಓಯೋ ಹೋಟೆಲ್ಗೆ ಸಂಬಂಧಿಸಿದ ಸಿಬ್ಬಂದಿಯಲ್ಲ. ಓಯೋ ರೂಮ್ ಸಿಬ್ಬಂದಿಗೂ ಈ ದಂಧೆಕೋರರಿಗೂ ಯಾವುದೇ ನಂಟು ಇಲ್ಲ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಹಾಗಾದ್ರೆ, ಈ ಕ್ಯಾಮರಾ ಕೀಚಕರು ಯಾರೆಂದು ತನಿಖೆ ವೇಳೆ ಬಯಲಾಗಿದೆ.
ಕಳೆದ ತಿಂಗಳು ಇಬ್ಬರು ಆರೋಪಿಗಳು ಕಳೆದ ತಿಂಗಳು 3 ನೇ ಹಂತದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕೊಠಡಿಯನ್ನು ಬುಕ್ ಮಾಡಿದ್ದರು. ಅಲ್ಲಿ ಅವರು ಗುಪ್ತ ಕ್ಯಾಮೆರಾವನ್ನು ಇರಿಸಿದ್ದರು. ನಂತ್ರ ಒಂದು ವಾರದ ಬಳಕ ಅದೇ ರೂಮ್ ಬುಕ್ ಮಾಡಿಕೊಂಡಿದ್ದಾರೆ. ಈ ವೇಳೆ ಅವರು ಈ ಮೊದಲು ಅಳವಡಿಸಿದ್ದ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಂಡ ಜೋಡಿಗಳಿಗೆ ಅವರ ಏಕಾಂತದ ವಿಡಿಯೋ ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಹಣ ನೀಡದಿದ್ದರೆ ವಿಡಿಯೋವನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ ಸುಲಿಗೆ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಆರೋಪಿಗಳಾದ ವಿಷ್ಣು ಸಿಂಗ್ ಮತ್ತು ಅಬ್ದುಲ್ ವಹಾಬ್ ಅವರನ್ನು ಬಂಧಿಸಿದ್ದಾರೆ. ಹೋಟೆಲ್ ಮತ್ತು ಅದರ ಸಿಬ್ಬಂದಿ ಘಟನೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದ್ರೆ, ಇಲ್ಲಿಯವರೆಗೂ ಘಟನೆ ಕುರಿತು OYO ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
BIGG NEWS: ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ; ಅ. 25 ರಂದು ಬೆಂಗಳೂರಿನ ದೇವಾಲಯ ಬಂದ್