ಬೆಳಗಾವಿ:ಬೆಳಗಾವಿ ಸುವರ್ಣಸೌಧದಲ್ಲಿ ಪಂಚಮಸಾಲಿ 2ಎ ಮೀಸಲಾತಿ ಒತ್ತಾಯಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಪಂಚಮಸಾಲಿ ಸಮಾಜದಿಂದ ವಿರಾಟ್ ಸಮಾವೇಶ ನಡೆಸಿದ್ದು, ಸಿಎಂ ಭರವಸೆ ಬಳಿಕ ‘ಸುವರ್ಣಸೌಧ’ ಮುತ್ತಿಗೆ ವಿಚಾರವನ್ನು ಪಂಚಮಸಾಲಿ ಸಮುದಾಯ ಕೈ ಬಿಟ್ಟಿದೆ.
ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮತ್ತೆ ಹತ್ತು ದಿನಗಳವರೆಗೆ ಸಿಎಂ ಬೊಮ್ಮಾಯಿ ಗಡುವು ಕೇಳಿದ್ದಾರೆ. ನಿಮ್ಮ ಸಮಸ್ಯೆ ಬಗ್ಗೆ ಸ್ಪಷ್ಟ ನಿರ್ಧಾರ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಹಿನ್ನೆಲೆ ಸಿಎಂ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ಪಂಚಮಸಾಲಿ ಸಮಾಜದ ನಾಯಕರು. ವೇದಿಕೆಯಲ್ಲೇ ಸಮಾಜದ ನಿರ್ಧಾರ ಹೇಳ್ತೇನೆ ಅಂತ ಮುಖಂಡರು ಹೊರಟಿದ್ದಾರೆ. ಅದೇ ರೀತಿ ಮೀಸಲಾತಿ ಘೋಷಣೆ ಮಾಡದಿದ್ದರೆ ಸುವರ್ಣಸೌಧ’ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದ ಪಂಚಮಸಾಲಿ ಸಮುದಾಯ ಮುತ್ತಿಗೆ ವಿಚಾರ ಕೈ ಬಿಟ್ಟು ವಾಪಸ್ ಆಗಿದೆ.
ಇನ್ನೂ, ಈ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಡಿ. 29ಕ್ಕೆ 2ಎ ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.. ಡಿ.28ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಿದರು.
BREAKIN NEWS : ಜಾಗತಿಕ ಕೋವಿಡ್ ಭೀತಿ ನಡುವೆ ‘ಮೂಗಿನ ಕೋವಿಡ್ ಲಸಿಕೆ’ಗೆ ಚಾಲನೆ | Nasal vaccine
ಡಿ. 29ಕ್ಕೆ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ : ಯತ್ನಾಳ್