ಬೆಂಗಳೂರು: 8 ವರ್ಷಗಳ ಕಠಿಣ ಪರಿಶ್ರಮದ ನಂತ್ರ ‘ಮಂಗಳಯಾನ(Mangalyaan)’ ಕಕ್ಷೆಗಾಮಿ ತನ್ನ ಕಾರ್ಯವನ್ನು ನಿಲ್ಲಿಸಿದೆ. ಇದು ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಿ ಅದರ ಅಪರೂಪದ ಮಾಹಿತಿಯನ್ನು ಭೂಮಿಗೆ ರವಾನಿಸುತ್ತಿತ್ತು. ಇದೀಗ ಕಕ್ಷೆಗಾಮಿಯ ಬ್ಯಾಟರಿ ಬರಿದಾಗಿದ್ದು, ಅದು ಕಾರ್ಯನಿರ್ವಹಿಸಲು ಸಾದ್ಯವಾಗುತ್ತಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂಲಗಳು ತಿಳಿಸಿವೆ.
“ಸದ್ಯ, ಇಂಧನ ಖಾಲಿಯಾಗಿದೆ. ಉಪಗ್ರಹದ ಬ್ಯಾಟರಿಯೂ ಖಾಲಿಯಾಗಿದೆ. ಹೀಗಾಗಿ ಅದರ ಸಂಪರ್ಕವು ಕೂಡ ಕಡಿತಗೊಂಡಿದೆ” ಎಂದು ಇಸ್ರೋ ಮೂಲಗಳು ತಿಳಿಸಿವೆ. ಆದ್ರೆ, ಈ ಬಗ್ಗೆ ಇಸ್ರೋ ಯಾವುದೇ ಮಾಹಿತಿ ನೀಡಿಲ್ಲ.
450 ಕೋಟಿ ರೂ. ವೆಚ್ಚದ ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ನವೆಂಬರ್ 5, 2013 ರಂದು PSLV-C25 ನಲ್ಲಿ ಉಡಾವಣೆ ಮಾಡಲಾಯಿತು ಮತ್ತು MOM ಬಾಹ್ಯಾಕಾಶ ನೌಕೆಯನ್ನು ಅದರ ಮೊದಲ ಪ್ರಯತ್ನದಲ್ಲಿ ಸೆಪ್ಟೆಂಬರ್ 24, 2014 ರಂದು ಯಶಸ್ವಿಯಾಗಿ ಮಂಗಳದ ಕಕ್ಷೆಗೆ ಸೇರಿಸಲಾಯಿತು. ಮೊದಲ ಪ್ರಯತ್ನದಲ್ಲೇ ಇಸ್ರೋ ಮಂಗಳ ಗ್ರಹದ ಕಕ್ಷೆಗೆ ಕಕ್ಷೆಗಾಮಿಯನ್ನು ಯಶಸ್ವಿಯಾಗಿ ಸೇರಿಸಿತ್ತು.
ಮಾರ್ಸ್ ಆರ್ಬಿಟರ್ ಕ್ರಾಫ್ಟ್ ಸುಮಾರು ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ. ಇದನ್ನು ಕೇವಲ ಆರು ತಿಂಗಳ ಅವಧಿಗೆ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿತ್ತು. ಆದ್ರೆ, ಇದು ಅವಧಿಗೂ ಮೀರಿ ಕಾರ್ಯನಿರ್ವಹಿಸಿದೆ. ಇದು ತನ್ನ ಕೆಲಸವನ್ನು ಸಂಪೂರ್ಣವಾಗಿ ಹಾಗೂ ಸಮರ್ಥವಾಗಿ ಮಾಡಿದ್ದು, ಗಮನಾರ್ಹ ವೈಜ್ಞಾನಿಕ ಫಲಿತಾಂಶಗಳನ್ನು ನೀಡಿದೆ.
SHOCKING NEWS: ಗಾಂಜಾ ಸೇವಿಸಿದ ಅಮಲಿನಲ್ಲಿ 6 ವರ್ಷದ ಬಾಲಕನ ಕತ್ತು ಸೀಳಿ ಕೊಲೆ, ಇಬ್ಬರು ಅರೆಸ್ಟ್
BIGG NEWS : ದಸರಾ ಹಬ್ಬಕ್ಕೆ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ : ಹೂವು, ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆ!