ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಲಾಗ್ಮನ್ ಪ್ರಾಂತ್ಯದಲ್ಲಿ ಶನಿವಾರ ಕಾರೊಂದು ಪಲ್ಟಿಯಾದ ಪರಿಣಾಮ ಇಬ್ಬರು ವೈದ್ಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ.
ಲಾಗ್ಮಾನ್ ಪ್ರಾಂತ್ಯದ ದವ್ಲತ್ ಶಾ ಜಿಲ್ಲೆಯ ಫರ್ಶಘನ್ ಕಣಿವೆಯ ಕೆಲ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ಅಫ್ಘಾನಿಸ್ತಾನದ ಸಲಾಂಗ್ ಹೆದ್ದಾರಿಯ ದೋಷಖ್ ಪ್ರದೇಶದಲ್ಲಿ ಮಿನಿಬಸ್ ಮಾದರಿಯ ಪ್ರಯಾಣಿಕ ವಾಹನವು ಪಲ್ಟಿ ಹೊಡೆದು ಮೂವರು ಸಾವನ್ನಪ್ಪಿದರು. ಭೀಕರ ಅಪಘಾತದಲ್ಲಿ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಈ ಬೆನ್ನಲ್ಲೇ, ಈ ದುರಂತ ನಡೆದಿದೆ.
BIGG NEWS: ಉತ್ತರಾಖಂಡದ ತೆಹ್ರಿ ಗರ್ವಾಲ್ನಲ್ಲಿ 4.5 ತೀವ್ರತೆಯ ಭೂಕಂಪ | Earthquake in Uttarakhand