ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯ ವಾಯುಸೇನಾ ನೆಲೆ(Air Force Station)ಯಲ್ಲಿ ದಿನಾಂಕ: 01.02.2025 ರಿಂದ 14.02.2025 ರವರೆಗೆ ಅಂತರಾಷ್ಟ್ರೀಯ ಮಟ್ಟದ ‘ಏರ್ ಇಂಡಿಯಾ-2025(AERO INDIA) ನಡೆಯಲಿದೆ.
ಏರ್ ಶೋ-2025 ನಡೆಯುತ್ತಿರುವ ಪ್ರಯುಕ್ತ ಯಲಹಂಕ ವಾಯುಸೇನಾ ನೆಲೆಯಿಂದ 10.00 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್ಗಳ ಎತ್ತರವನ್ನು ದಿನಾಂಕ: 01.02.2025 ರಿಂದ 14.02.2025 ರವರೆಗೆ ತಗ್ಗಿಸಲು ಹಾಗೂ ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಬಹುಮಹಡಿ ಕಟ್ಟಡಗಳ ಸಂಸ್ಥೆಗಳು/ಅಭಿವೃದ್ಧಿದಾರರಿಗೆ ಈ ಮೂಲಕ ತಿಳಿಯಪಡಿಸಿದೆ.
ಮುಂದುವರಿದು, ವಾಯುಸೇನಾ ನೆಲೆಯಿಂದ 10.00 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲಾ ಬೃಹತ್ ಕಟ್ಟಡಗಳು, ಮೇಲಿನ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್ಕ್ರಾಪ್ಟ್ 1937ರ ರೂಲ್ 91 ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ನಗರ ಯೋಜನೆ-ಉತ್ತರ ವಿಭಾಗದ ಜಂಟಿ ನಿರ್ದೇಶಕರು ತಿಳಿಸಿರುತ್ತಾರೆ.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ, ಜರ ರಕ್ಷಣೆಯನ್ನು ಮಾಡುವವರೇ ಇಲ್ಲ: ಆರ್.ಅಶೋಕ್ ಕಿಡಿ
‘BPL, APL ಕಾರ್ಡ್’ದಾರರೇ ಗಮನಿಸಿ: ಜ.31 ‘e-KYC’ಗೆ ಲಾಸ್ಟ್ ಡೇಟ್, ಮಾಡಿಸದಿದ್ರೆ ಬರಲ್ಲ ರೇಷನ್