ಶಿವಮೊಗ್ಗ: ಕಾಮಗಾರಿ ನಡೆಸಿದ್ದಂತ ಬಾಕಿ ಬಿಲ್ ಬಿಡುಗಡೆಗಾಗಿ 1.20 ಲಕ್ಷ ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲೇ ಕರ್ನಾಟಕ ನಿರಾವರಿ ನಿಗಮದ ಸೆಕ್ಷನ್ ಆಫೀಸರ್, ಲೈಟ್ ಮಜದೂರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗದಲ್ಲಿ ಕರ್ನಾಟಕ ನಿರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತ, ಬಿಆರ್ ಪಿ ವ್ಯಾಪ್ತಿಯ ಭದ್ರಾವತಿ ತಾಲ್ಲೂಕು ಗೋಂಧಿ ಬಲದಂಡೆ ನಾಲೆಯ ಶೀಲ್ಡ್ ತೆಗೆಯಲು ಇ-ಟೆಂಡರ್ ಪಡೆದು, 2023ರಲ್ಲಿ ಡಿಸೆಂಬರ್ ನಲ್ಲಿ ಗುತ್ತಿಗೆದಾರ ವಿ.ರವಿ ಎಂಬುವರು ಪಡೆದಿದ್ದರು.
2023ರ ಡಿಸೆಂಬರ್ ನಲ್ಲೇ ಕೆಲಸ ಪ್ರಾರಂಭಿಸಿ 2024ರ ಜನವರಿಗೆ ಕಾಮಗಾರಿ ಮುಕ್ತಾಯಗೊಳಿಸಿದ್ದರು. ಆದರೇ ಬಾಕಿ ಬಿಲ್ ಪಾವತಿ ಮಾಡಿರಲಿಲ್ಲ. ದಿನಾಂಕ 27-12-2024ರಂದು ಡಿಬಿ ಹಳ್ಳಿಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಗೆ ಹೋಗಿ, ಕಚೇರಿಯಲ್ಲಿದ್ದಂತ ಸೆಕ್ಷನ್ ಆಫೀಸರ್ ಕೊಟ್ರಪ್ಪ.ಟಿ ಭೇಟಿ ಮಾಡಿ, ಮಂಜೂರು ಮಾಡುವಂತೆ ಕೋರಿದ್ದರು.
ಸೆಕ್ಷನ್ ಆಫೀಸರ್ ಬಾಕಿ ಕಾಮಗಾರಿ ಬಿಲ್ ಬಿಡುಗಡೆಗೆ 1.20 ಲಕ್ಷ ಲಂಚಕ್ಕೆ ಭೇಡಿಕೆ ಇಟ್ಟಿದ್ದರು. ಇದನ್ನು ಗುತ್ತಿಗೆದಾರ ರವಿ ವಾಯ್ಸ್ ರೆಕಾರ್ಡ್ ಮಾಡಿಕೊಂಡು ದಾಖಲೆ ಸಹಿತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಹೊಸ ವರ್ಷದ ದಿನವಾದಂತ ಇಂದು ಸಂಜೆ 4.30ಕ್ಕೆ ಕರ್ನಾಟಕ ಕಾವೇರಿ ನೀರಾವರಿ ನಿಗಮ ನಿಯಮಿತ ಭದ್ರಾವತಿ ಯೋಜನಾ ವೃತ್ತಕ್ಕೆ ತೆರಳಿ ಸೆಕ್ಷನ್ ಆಫೀಸರ್ ಕೊಟ್ರಪ್ಪ ಮತ್ತು ಕಚೇರಿ ಲೈಟ್ ಮಜದೂರ್ ಅರವಿಂದ್ 1.20 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಿದ್ದಾರೆ.
ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವೀರಬಸಪ್ಪ.ಎಲ್ ಕುಸಲಾಪು ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಮೊಬೈಲ್ ಆಪ್ ಮೂಲಕ ಹಿಂಗಾರು ಬೆಳೆ ಸಮೀಕ್ಷೆಗೆ ವಿವರ ದಾಖಲಿಸಲು ಅವಕಾಶ
ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಜ.3ರಂದು ಬಳ್ಳಾರಿಯಲ್ಲಿ ‘ಬೃಹತ್ ಉದ್ಯೋಗ ಮೇಳೆ’ ಆಯೋಜನೆ