ಬೆಂಗಳೂರು : ತಿರುಪತಿಯ ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ, ಹಂದಿಯ ಮಾಂಸ ಬಳಸಲಾಗುತ್ತದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಅದರ ಬೆನ್ನಲ್ಲೆ ಲ್ಯಾಬ್ ಟೆಸ್ಟ್ ವರದಿಯಲ್ಲಿ ಕೂಡ ಲಡ್ಡು ತಯಾರಿಕೆಯಲ್ಲಿ ಇವುಗಳೆಲ್ಲವನ್ನು ಬಳಸಲಾಗಿದೆ ಎಂಬ ಸ್ಪೋಟಕ ಮಾಹಿತಿ ಹೊರಬಂದಿತ್ತು. ಇದೀಗ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇನ್ನೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪ ಏನೆಂದರೆ, ತಿರುಪತಿ ಲಡ್ಡು ತಯಾರಿಕೆಗೆ ಪೂರೈಸಿದ್ದ ಕಂಪನಿಯೇ ಇದೀಗ ತಮಿಳುನಾಡಿನ ಪಳೀನಿಯ ಪ್ರಸಿದ್ಧ ಮುರುಗನ ದೇವಸ್ಥಾನಕ್ಕೂ ಕಲಬೆರಕೆ ತುಪ್ಪವನ್ನು ಪೂರೈಸುತ್ತಿತ್ತು ಎಂದು ಶಾಸಕ ಯತ್ನಾಳ್ ಅವರು ಆರೋಪಿಸಿದ್ದಾರೆ.ಈ ಬಗ್ಗೆ ತಮಿಳುನಾಡು ಬಿಜೆಪಿ ಕೈಗಾರಿಕಾ ಘಟಕದ ಉಪಾಧ್ಯಕ್ಷ ಸೆಲ್ವ ಕುಮಾರ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಿಟಿಡಿಗೆ ತುಪ್ಪ ಪೂರೈಕೆ ಮಾಡಿದ್ದ ಕಂಪನಿಯ ಮಾಲೀಕ ರಾಜಶೇಖರ್ ಅವರನ್ನು ಡಿಎಂಕೆ ಸರ್ಕಾರವು ಪಳನಿ ಮುರುಗನ್ ದೇವಸ್ಥಾನ ಟ್ರಸ್ಟ್ ನ ನಿರ್ವಹಣೆಗೆ ನೇಮಸಿತ್ತು. ವೈಎಸ್ ಆರ್ ಸಿಪಿ ಮತ್ತು ಡಿಎಂಕೆ ಬೆಂಬಲದೊಂದಗಿೆ ಇಡೀ ದಕ್ಷಿಣ ಭಾರತದಲ್ಲಿ ಸನಾತನ ವಿರೋಧಿ ಶಕ್ತಿಗಳು ಭಾರೀ ಉತ್ಸಾಹದಿಂದ ಕೆಲಸ ಮಾಡುವಂತೆ ತೋರುತ್ತದೆ. ತಮಿಳುನಾಡು ಸರ್ಕರಾದ ಅಧೀನಗಳಲ್ಲಿರುವ ದೇವಸ್ಥಾನಗಳಲ್ಲೂ ಪ್ರಸಾದಗಳ ಗುಣಮಟ್ಟ ಪರೀಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪೋಸ್ಟನ್ನು ರೀಪೋಸ್ಟ್ ಮಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಿ ಟ್ವೀಟ್ ಮಾಡಿರುವ ಯತ್ನಾಳ್ ಅವರು, ತಿರುಪತಿಯ ಲಡ್ಡು ತಯಾರು ಮಾಡಲು ಪ್ರಾಣಿಜನ್ಯ ಕೊಬ್ಬು, ಮೀನಿನ ಎಣ್ಣೆ ಇರುವ ತುಪ್ಪವನ್ನು ಟಿ.ಟಿ.ಡಿ ಗೆ ಸರಬರಾಜು ಮಾಡಿದ ಕಂಪನಿಯೇ ಪಳನಿಯ ಸುಪ್ರಸಿದ್ದ ಮುರುಗನ್ ದೇವಸ್ಥಾನಕ್ಕೂ ಸರಬರಾಜು ಮಾಡಿದೆ ಎಂದು ಹೇಳಲಾಗಿದೆ.
ಹಿಂದೂಗಳ ಪವಿತ್ರ ಸ್ಥಾನಗಳನ್ನು ಆಯ್ಕೆಮಾಡಿಕೊಂಡು ಅಲ್ಲಿರುವ ಪಾವಿತ್ರ್ಯತೆಯನ್ನು ಹಾಳು ಮಾಡುವುದೇ ಈ ಸರ್ಕಾರಗಳ, ಪಟ್ಟಭದ್ರರ ಧ್ಯೇಯವಾಗಿದೆ. ಇದು ಕ್ಷಮಿಸಲಾಗದ ಅಪರಾಧ. ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಕಂಪನಿಯ ಮಾಲೀಕರ ಮೇಲೆ ಜಾಮೀನು ರಹಿತ ಕೇಸ್ ಹಾಕಿ ಬಂಧಿಸಬೇಕು. ಅವರ ಆಸ್ತಿಗಳನ್ನು ಸರ್ಕಾರ ವಶಕ್ಕೆ ಪಡೆದು ತಕ್ಕ ಪಾಠ ಕಲಿಸಲಿ.
ತಿರುಪತಿಯ ಲಡ್ಡು ತಯಾರು ಮಾಡಲು ಪ್ರಾಣಿಜನ್ಯ ಕೊಬ್ಬು, ಮೀನಿನ ಎಣ್ಣೆ ಇರುವ ತುಪ್ಪವನ್ನು ಟಿ.ಟಿ.ಡಿ ಗೆ ಸರಬರಾಜು ಮಾಡಿದ ಕಂಪನಿಯೇ ಪಳನಿಯ ಸುಪ್ರಸಿದ್ದ ಮುರುಗನ್ ದೇವಸ್ಥಾನಕ್ಕೂ ಸರಬರಾಜು ಮಾಡಿದೆ ಎಂದು ಹೇಳಲಾಗಿದೆ.
ಹಿಂದೂಗಳ ಪವಿತ್ರ ಸ್ಥಾನಗಳನ್ನು ಆಯ್ಕೆಮಾಡಿಕೊಂಡು ಅಲ್ಲಿರುವ ಪಾವಿತ್ರ್ಯತೆಯನ್ನು ಹಾಳು ಮಾಡುವುದೇ ಈ ಸರ್ಕಾರಗಳ,… https://t.co/zvRpkuvUnA
— Basanagouda R Patil (Yatnal) (@BasanagoudaBJP) September 21, 2024