ಬೆಂಗಳೂರು : ರೈಲ್ವೆ ನಿಲ್ದಾಣಗಳಲ್ಲಿ ಆಧಾರ್ ಸಂಬಂಧಿತ ಸೇವೆಗಳನ್ನು ಒದಗಿಸಲು ಭಾರತೀಯ ರೈಲ್ವೆಯು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದೊಂದಿಗೆ (UIDAI) ಕೈಜೋಡಿಸಿದೆ.
ಹೌದು, ನೈಋತ್ಯ ರೈಲ್ವೆಯ ಪ್ರಾಯೋಗಿಕ ಯೋಜನೆಯಾಗಿ, ಬೆಂಗಳೂರು ವಿಭಾಗವು ತನ್ನ ಮೊದಲ ಆಧಾರ್ ಕೇಂದ್ರವನ್ನು 10.10.2022 ರಂದು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ (ಕಾನ್ಕೋರ್ಸ್ ಪ್ರದೇಶ) ತೆರೆದಿದೆ. ಆಧಾರ್ ಕೇಂದ್ರವನ್ನು ಶ್ರೀ ಶ್ಯಾಮ್ ಸಿಂಗ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ನೈಋತ್ಯ ರೈಲ್ವೆ, ಬೆಂಗಳೂರು ವಿಭಾಗ ಮತ್ತು ಶ್ರೀ ಆರ್.ಎಸ್. ಗೋಪಾಲನ್, ಉಪ ಮಹಾನಿರ್ದೇಶಕರು, ಯುಐಡಿಎಐ ಇಂದು ಉದ್ಘಾಟಿಸಿದರು
ಕೆಳಗಿನ ಸೇವೆಗಳನ್ನು ಪಡೆಯಲು ಭಾರತೀಯ ನಿವಾಸಿಗಳಿಗೆ ಆಧಾರ್ ಕೇಂದ್ರವು 10:00 ಗಂಟೆಯಿಂದ 17:00 ಗಂಟೆಯವರೆಗೆ (ಸೋಮವಾರದಿಂದ ಶನಿವಾರದವರೆಗೆ) ತೆರೆದಿರುತ್ತದೆ:-
ಎ) ಆಧಾರ್ ಉತ್ಪಾದನೆ
ಬಿ) ಕಡ್ಡಾಯ ಬಯೋಮೆಟ್ರಿಕ್ ನವೀಕರಣ
ಸಿ) ಜನಸಂಖ್ಯಾ / ಬಯೋಮೆಟ್ರಿಕ್ ಅಥವಾ ಎರಡೂ ಅಪ್ಡೇಟ್
ಡಿ) ಇ-ಕೆವೈಸಿ ಬಳಸಿ ಆಧಾರ್ ಹುಡುಕಾಟ/ಆಧಾರ್ ಕಂಡು ಹಿಡಿಯುದು /ಎ4 ಶೀಟ್ನಲ್ಲಿ ಕಲರ್ ಪ್ರಿಂಟ್ ಔಟ್.
ಪ್ರತಿ ಡೆಮೊಗ್ರಾಫಿಕ್/ಬಯೋಮೆಟ್ರಿಕ್ ಅಪ್ಡೇಟ್ಗಳಿಗೆ ರೂ.50/- ಶುಲ್ಕ ವಿಧಿಸಲಾಗುತ್ತದೆ ಮತ್ತು ಇ-ಕೆವೈಸಿ ಬಳಸಿಕೊಂಡು ಪ್ರತಿ ಆಧಾರ್ ಹುಡುಕಾಟಕ್ಕೆ, ಆಧಾರ್ ಕಂಡು ಹಿಡಿಯುದು ಮತ್ತು ಬಣ್ಣದ ಪ್ರಿಂಟ್ ಔಟಿಗೆ ರೂ.30/- ಶುಲ್ಕ ವಿಧಿಸಲಾಗುತ್ತದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
BREAKING NEWS ; ರಷ್ಯಾ-ಉಕ್ರೇನ್ ಸಂಘರ್ಷ ಉಲ್ಬಣ ; “ತೀವ್ರ ಕಳವಳ” ವ್ಯಕ್ತಪಡಿಸಿದ ಭಾರತ |Ukrane War
ಅ.13 ರಿಂದ 27 ರವರೆಗೆ ಹಾಸನಾಂಬೆ ದರ್ಶನ : ದೇವಿಯ ಆಭರಣ ಖಜಾನೆಯಿಂದ ದೇಗುಲಕ್ಕೆ ಆಗಮನ |Hasanambe Temple