ಬೆಂಗಳೂರು : ಟಿಪ್ಪು ನಿಜ ಕನಸು ನಾಟಕವನ್ನು ರಚಿಸಿದ್ದ ಅಡ್ಡಂಡ ಕಾರ್ಯಪ್ಪ ಅವರಿಗೆ ಕೊಲೆ ಬೆದರಿಕೆ ಬಂದಿದೆ ಎನ್ನಲಾಗಿದೆ.
ಈ ಕುರಿತು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಅವರು ಲಿಖಿತ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಶಿವಮೊಗ್ಗ ಬ್ರಾಹ್ಮಣ ಬೀದಿಯ ವಿಳಾಸದಿಂದ ಬೆದರಿಕೆ ಪತ್ರ ಬಂದಿದ್ದು, ‘ನೀವಿಗಾ ಸಾಯುವ ಕೊಲೆಯಾಗುವ ಹಂತ ತಲುಪಿದ್ದೀರಾ, ನಿಮ್ಮನ್ನು ನೀವು ನಂಬಿರುವ ದೇವರು ಸಹಾ ಉಳಿಸುವುದಿಲ್ಲ, ಎಂದು ಬೆದರಿಕೆ ಒಡ್ಡಲಾಗಿದೆ.
ಇತ್ತೀಚೆಗಷ್ಟೇ ಅಡ್ಡಂಡ ಕಾರ್ಯಪ್ಪ ಭಾರೀ ವಿರೋಧದ ನಡುವೆ ಟಿಪ್ಪು ನಿಜಕನಸು ನಾಟಕ ಕೃತಿ ರಚಿಸಿ, ನಾಟಕವನ್ನು ನಿರ್ದೇಶನ ಮಾಡಿದ್ದರು. ಮೈಸೂರಿನ ಮಹೇಶ್ ಚಂದ್ರ ಗುರುವಿನಿಂದ ನಾಟಕ ಪ್ರದರ್ಶನ ಮಾಡಿದ ಮೇಲೆ ವಿಡಿಯೋ ಮಾಡಿ ನನ್ನ ಬಗ್ಗೆ ಟೀಕೆ ಮಾಡಿದ್ದರು ಇದರಿಂದ ಪ್ರಚೋದನೆಗೊಂಡು ಬೆದರಿಕೆ ಪತ್ರ ಬಂದಿದ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
BIGG NEWS: ʻಸಲಿಂಗ ವಿವಾಹʼದ ಮಾನ್ಯತೆಯನ್ನು ರಕ್ಷಿಸುವ ಮಸೂದೆ ಅಂಗೀಕರಿಸಿದ ಯುಎಸ್ ಸೆನೆಟ್
BIGG NEWS : ಬೆಂಗಳೂರಿನಲ್ಲಿ ‘ಇ-ಸಿಗರೇಟ್’ ಅಡ್ಡೆ ಮೇಲೆ ಪೊಲೀಸರ ದಾಳಿ : ಹಲವರು ವಶಕ್ಕೆ