ಬೆಂಗಳೂರು: ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಇಂದು ಈ ಪ್ರಕರಣ ಸಂಬಂಧ ಇಸಿಐಆರ್ ದಾಖಲಿಸಿಕೊಂಡಿರುವಂತ ಇಡಿ ಅಧಿಕಾರಿಗಳು, ಬೆಂಗಳೂರು, ಮುಂಬೈನ ಹಲವೆಡೆ ದಾಳಿಯನ್ನು ನಡೆಸಿದ್ದಾರೆ.
ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಇಡಿ ಎಂಟ್ರಿಯಾಗಿದ್ದು, ಬೆಂಗಳೂರು, ಮುಂಬೈನ ಹಲವೆಡೆ ದಾಳಿಯನ್ನು ನಡೆಸಿದೆ.
ಪಿಎಂಎಲ್ಎ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿರುವಂತ ಇಡಿ ಅಧಿಕಾರಿಗಳು, ಭಾರತದಿಂದ ಅಕ್ರಮವಾಗಿ ಹಣ ವರ್ಗಾವಣೆ ಬಗ್ಗೆಯೂ ತನಿಖೆ ನಡೆಸುತ್ತಿದೆ. ಅಲ್ಲದೇ ಇದು ದೃಢಪಟ್ಟಿದೆ ಎನ್ನಲಾಗುತ್ತಿದೆ.
ಹವಾಲಾ ದಂಧೆಯ ಮೂಲಕ ಭಾರತದಿಂದ ದುಬೈಗೆ ಹಣ ಹೋಗುತ್ತಿರೋದನ್ನು ಪತ್ತೆ ಹಚ್ಚಿರುವಂತ ಇಡಿ ಅಧಿಕಾರಿಗಳು, ಬಳಿಕ ಚಿನ್ನದ ಗಟ್ಟಿಯ ರೂಪದಲ್ಲಿ ಬೆಂಗಳೂರಿಗೆ ವಾಪಾಸ್ ಬರುವ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ವಿದೇಶದಲ್ಲಿರುವವರಿಗೆ ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಅಕ್ರವಾಗಿ ಚಿನ್ನ ಕಳ್ಳ ಸಾಗಾಣಿಕೆ ಸಂಬಂಧ ಇಡಿ ಅಧಿಕಾರಿಗಳು ಇಸಿಐಆರ್ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಈ ಸಂಬಂಧ ಸಿಬಿಐ ಅಧಿಕಾರಿಗಳು ದಾಖಲಿಸಿರುವಂತ ಎಫ್ಐಆರ್ ಬಗ್ಗೆಯೂ ಇಡಿ ಅಧಿಕಾರಿಗಳಿಂದ ಇಸಿಐಆರ್ ನಲ್ಲಿ ಉಲ್ಲೇಖಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ISRO ಸ್ಪೇಸ್ ಡಾಕಿಂಗ್ ಯಶಸ್ವಿ: ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ | Isro
ಪಾರ್ಕಿಂಗ್ ವಿಚಾರವಾಗಿ ನೆರೆಹೊರೆಯವರೊಂದಿಗೆ ಜಗಳ: ಡಯಾಲಿಸಿಸ್ ವಿಜ್ಞಾನಿ ಸಾವು | Scientist dies