ಬೆಂಗಳೂರು : ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಫಿಪೊಸ ಅಡಿ ನಟಿ ರನ್ಯಾ ರಾವ್ ಬಂಧನ ಪ್ರಶ್ನಿಸಿ ಹೆಬಿಎಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದ್ದು, ನಟಿ ರನ್ಯಾ ರಾವ್ ತಾಯಿ ರೋಹಿಣಿ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು.
ಕಾಫಿಪೊಸ ಅಡಿಯ ಬಂಧನವನ್ನು ಸಲಹಾ ಮಂಡಳಿ ದೃಢೀಕರಿಸಿದೆ ಎಂದು ಹೈಕೋರ್ಟ್ ಗೆ ಅರ್ಜಿದಾರರ ಪರ ವಕೀಲರು ಮಾಹಿತಿ ನೀಡಿದರು. ಕಾಫಿ ಪೋಸಾ ಅಡಿ ಬಂಧನಕ್ಕೆ ನೀಡಿದ ಕಾರಣ ದೋಷಪೂರಿತ ವೆಂದು ವಾದಿಸಿದರು. ಕಾಫಿ ಪೋಸಾ ಆಡಿ, ರನ್ಯಾ ಬಂಧನವೇ ಕಾನೂನುಬಾಹಿರವಾಗಿದೆ ಎಂದು ವಾದಿಸಿದರು. ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 28ಕ್ಕೆ ಮುಂದೂಡಿತು