ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಬಂಧನವಾಗಿದೆ. ಈ ಕೇಸ್ ನಂತ್ರ ಡಿಜಿಪಿ ಡಾ.ರಾಮಚಂದ್ರ ರಾವ್ ಅವರ ವಿರುದ್ಧವೂ ಈ ಪ್ರಕರಣದಲ್ಲಿ ಭಾಗಿಯಾಗಿರೋ ಆರೋಪ ಕೇಳಿ ಬಂದಿತ್ತು. ಹೀಗಾಗಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ‘ಕಡ್ಡಾಯ ರಜೆ’ ಮೇಲೆ ಕಳುಹಿಸಲಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಐಪಿಎಸ್ ಅಧಿಕಾರಿ ಕೆವಿ ಶರತ್ ಚಂದ್ರ ಅವರನ್ನು ಎಡಿಜಿಪಿ, ನೇಮಕಾತಿಯಿಂದ ವರ್ಗಾವಣೆ ಮಾಡಿ, ಛೇರ್ ಮೆನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್, ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಮತ್ತು ಇನ್ಫಾಸ್ಟ್ರಕ್ಚರ್ ಡೆಲವೆಲಪ್ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.
ಇನ್ನೂ ಈ ಹುದ್ದೆಯಲ್ಲಿದ್ದಂತ ಐಪಿಎಸ್ ಅಧಿಕಾರಿ ಡಾ.ಕೆ ರಾಮಚಂದ್ರ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯ ರಾವ್ ಬಂಧನದ ಬಗ್ಗೆ ಆಘಾತ ಮತ್ತು ವಿನಾಶವನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಮಹಾನಿರ್ದೇಶಕ (ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ) ಕೆ.ರಾಮಚಂದ್ರ ರಾವ್ ಅವರು ವ್ಯಕ್ತಪಡಿಸಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದಂತ ಅವರು, ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ನನ್ನ ವೃತ್ತಿಜೀವನದ ಮೇಲೆ ಯಾವುದೇ ಕಪ್ಪು ಗುರುತು ಇಲ್ಲ. ಕಳ್ಳಸಾಗಣೆ ಚಟುವಟಿಕೆಗಳಲ್ಲಿ ರನ್ಯಾ ಭಾಗಿಯಾಗಿರುವ ಬಗ್ಗೆ ತನಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ಮಾಧ್ಯಮ ವರದಿಗಳ ಮೂಲಕ ಮಾತ್ರ ಬಂಧನದ ಬಗ್ಗೆ ತಿಳಿದಿದೆ ಎಂದು ಅವರು ಸಮರ್ಥಿಸಿಕೊಂಡಿದ್ದರು.
‘ಬಿಸಿಲಿನ ತಾಪಮಾನ’ದಿಂದ ರಕ್ಷಣೆ ಪಡೆಯಲು ಈ ‘ಆರೋಗ್ಯ ಸಲಹೆ’ಗಳನ್ನು ಪಾಲಿಸಿ | Heat Wave Alert
BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!