ಬೆಂಗಳೂರು: ಕಾರ್ಯಕ್ರಮವೊಂದಕ್ಕೆ ತೆರಳಿದ್ದಂತ ನಟಿ ರಾಗಿಣಿ ದ್ವಿವೇದಿ ಈಗ ಸುದ್ದಿಯಲ್ಲಿದ್ದಾರೆ. ಸೆಲ್ಫಿ ಪೋಟೋ ತೆಗೆಸಿಕೊಳ್ಳೋದಕ್ಕೆ ಮುಂದಾದಂತ ಅಭಿಮಾನಿಯ ಕೆನ್ನೆಗೆ ಕಪಾಳ ಮೋಕ್ಷ ಮಾಡುವ ಮೂಲಕವಾಗಿದೆ.
ನಗರದಲ್ಲಿನ ಕಾರ್ಯಕ್ರಮವೊಂದಕ್ಕೆ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ತೆರಳಿದ್ದರು. ಸೆಲ್ಫಿ ಪೋಟೋ ಕೇಳಿದಂತ ಅಭಿಮಾನಿಯೊಂದಿಗೆ ಪೋಸ್ ಕೊಟ್ಟಿದ್ದರು. ಈ ಸಂದರ್ಭದಲ್ಲಿಯೇ ಅಭಿಮಾನಿಯೊಬ್ಬ ಕೈ ಹಿಡಿದು ಎಳೆದೇ ಬಿಟ್ಟನು.
ಅಭಿಮಾನಿಯೊಬ್ಬ ಕೈ ಹಿಡಿದು ಎಳೆಯುತ್ತಿದ್ದಂತೆ ಸಿಟ್ಟಾದಂತ ನಟಿ ರಾಗಿಣಿ ದ್ವಿವೇದಿ ಅವರು ದಿಢೀರ್ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯ ಕೆನ್ನೆಗೆ ನಟಿ ರಾಗಿಣಿ ದ್ವಿವೇದಿ ಬಾರಿಸಿದಂತ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೋಳಿ ಹಬ್ಬದ ಪ್ರಯುಕ್ತ ವಿಶಾಖಪಟ್ಟಣಂ-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ
ಸಾರ್ವಜನಿಕರೇ ಗಮನಿಸಿ : ವರ್ಷಕ್ಕೊಮ್ಮೆಯಾದರೂ ಈ 10 `ರಕ್ತ ಪರೀಕ್ಷೆ’ ಮಾಡಿಸಲೇಬೇಕು.!