ಬಳ್ಳಾರಿ: ನಟ ಯಶ್ ಬೆಂಗಾವಲು ಪಡೆ ವಾಹನವೊಂದು ಯುವಕನ ಕಾಲಿನ ಮೇಲೆ ಹರಿದು ಗಾಯವಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ನಟ ಯಶ್ ಬಳ್ಳಾರಿಯಲ್ಲಿ ಅಮೃತೇಶ್ವರ ದೇವಸ್ಥಾನ ಉದ್ಘಾಟನೆ ವೇಳೆ ಆಗಮಿಸಿದ್ದರು. ಈ ವೇಳೆ, ನೂಕು-ನುಗ್ಗಲು ಉಂಟಾಗಿ ಯಶ್ ಬೆಂಗಾವಲು ಪಡೆಯ ಕಾರು ಹರಿದು ಅಭಿಮಾನಿಯೊಬ್ಬ ಗಾಯಗೊಂಡಿದ್ದಾನೆ.
ನಗರ ಹೊರವಲಯದ ಬಾಲಾಜಿ ನಗರ ಕ್ಯಾಂಪ್ ಬಳಿ ನೂತನವಾಗಿ ಕೃಷ್ಣ ಶಿಲೆಯಿಂದ ನಿರ್ಮಿಸಲಾಗಿರುವ ಅಮೃತೇಶ್ವರ ದೇವಸ್ಥಾನದಲ್ಲಿ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಕಾರ್ಯಕ್ರಮಕ್ಕೆ ಚಿತ್ರನಟ ರಾಕಿಂಗ್ ಸ್ಟಾರ್‌ಯಶ್ ಆಗಮಿಸಿ, ಪೂಜೆ ಸಲ್ಲಿಸಿದರು.
ತೆಲುಗಿನ ಚಿತ್ರ ನಿರ್ಮಾಪಕ ಹಾಗೂ ವಿತರಕ ಕೊರ್ರಪಾಟಿ ರಂಗನಾಥ ಸಾಯಿ ಅವರು ಯಶ್ ಅವರನ್ನು ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದರು. ಈ ವೇಳೆ, ನೂಕು-ನುಗ್ಗಲು ಉಂಟಾಗಿ ಯಶ್ ಬೆಂಗಾವಲು ಪಡೆಯ ಕಾರು ಹರಿದು ಅಭಿಮಾನಿಯೊಬ್ಬ ಗಾಯಗೊಂಡಿದ್ದಾನೆ.ಸಿರುಗುಪ್ಪದ ಪಿಯುಸಿ ವಿದ್ಯಾರ್ಥಿ ಉಮೇಶ್ ಎಂಬ ಯುವಕನ ಪಾದದ ಮೇಲೆ ಕಾಲಿನ ಗಾಲಿ ಹರಿದಿದ್ದರಿಂದ ತೀವ್ರ ಗಾಯವಾಗಿದ್ದು, ವಿಮ್ಸ್ ಟ್ರಾಮಾಕೇರ್‌ಸೆಂಟರ್‌ನಲ್ಲಿ ದಾಖಲು ಮಾಡಲಾಗಿದೆ.
ಇತ್ತೀಚಿಗೆ ಗದಗ ಜಿಲ್ಲೆಯಲ್ಲಿ ನಟ ಯಶ್ ಹುಟ್ಟುಹಬ್ಬದ ಅಂಗವಾಗಿ ಮಧ್ಯರಾತ್ರಿ ಅವರ ಕಟೌಟನ್ನು ಅಳವಡಿಸಲು ಹೋಗಿ ಮೂವರು ಯುವಕರು ವಿದ್ಯುತ್ ತಂತಿ ತಗುಲಿ ದಾರುಣವಾಗಿ ಸಾವನಪ್ಪಿದ್ದರು. ಈ ಸಂದರ್ಭದಲ್ಲಿ ನಟ ಯಶ್ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತೈಸಿ ಪರಿಹಾರವನ್ನು ಕೂಡ ನೀಡಿದ್ದರು.