ಬೆಂಗಳೂರು : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುಣಧೂರು ಗ್ರಾಮದಲ್ಲಿ ನೀಲಗಿರಿ ತೋಪಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ 25 ಅಡಿ ಕಟೌಟ್ ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಮೂವರು ಯುವಕರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸರ್ಕಾರ ಮೃತ ಕುಟುಂಬಸ್ಥರಿಗೆ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದೆ ಎಂದ್ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್ ಘಟನೆ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಗದಗಕ್ಕೆ ಹೋದಾಗ ಕುಟುಂಬಸ್ಥರಿಗೆ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇನೆ ಇದೀಗ ಮೃತ ಕುಟುಂಬಸ್ಥರಿಗೆ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಘಟನೇ ಹಿನ್ನೆಲೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುಣಧೂರು ಗ್ರಾಮದ ನೀಲಗಿರಿ ತೋಪಿನಲ್ಲಿ ತಡರಾತ್ರಿ ನಟ ಯಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಸುಮಾರು 25 ಅಡಿ ಕಟೌಟ್ ಅನ್ನು ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಮೂರು ಯುವಕರು ಸಾವನ್ನಪ್ಪಿದ್ದಾರೆ.
ಮೃತರನ್ನು ಹನುಮಂತ್ ಹರಿಜನ್ (21) ಮುರಳಿ ನಡುವಿನಮನಿ (20) ನವೀನ್ (19) ಮೃತ ದುರ್ದೈವಿಗಳಾಗಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ದುರಂತದಲ್ಲಿ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮಂಜುನಾಥ್ ದೀಪಕ್ ಹರಿಜನ್ ಹಾಗೂ ಪ್ರಕಾಶ್ ಎಂಬ ಯುವಕರಿಗೆ ಗಂಭೀರವಾದಂತಹ ಗಾಯಗಳಾಗಿವೆ.ತಡರಾತ್ರಿ ಬರ್ತಡೆ ಬ್ಯಾನರ್ ಕಟ್ಟುವಾಗ ನಡೆದ ದುರಂತವಾಗಿದೆ ಎಂದು ತಿಳಿದುಬಂದಿದೆ.
ತಡ ರಾತ್ರಿಯ ಸುಮಾರು 25 ಅಡಿಗು ಹೆಚ್ಚು ಎತ್ತರವಾಗಿರುವಂತಹ ಯಶ್ ಬ್ಯಾನರ್ ಅವರನ್ನು ಕಟ್ಟುವ ವೇಳೆ ವಿದ್ಯುತ್ ಶಾಕ್ ತಗೋಳಿ ಸ್ಥಳದಲ್ಲಿ ಮೂವರು ಯುವಕರು ಸಾವನಪ್ಪಿದ್ದಾರೆ. ಮೂವರು ಯುವಕರು ಕೂಲಿನಲ್ಲಿ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದು ಯಶ್ ಅವರ ಮೇಲೆ ಅಪಾರವಾದ ಅಂತಹ ಅಭಿಮಾನ ಹೊಂದಿದ್ದರು. ಮೃತ ಯುವಕರ ಮೇಲೆ ಮನೆ ನಿರ್ವಹಣೆ ನಡೆಯುತ್ತಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಸಾವನ್ನಪ್ಪಿರುವ ಯುವಕರ ಕುಟುಂಬದವರ ಆಕರಂದನ ಮುಗಿಲು ಮುಟ್ಟಿದೆ.ಇದೀಗ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.