ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ಅವರು ‘ಟ್ಯಾಕ್ಸಿಕ್’ ಅವರು ಕಾಣಿಸಿಕೊಳ್ಳುತ್ತಿದ್ದು ಅವರ ಈ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಸಿನಿಮಾಗಳು ಯಾವ ಚಿತ್ರರಂಗಗಳಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಪ್ರೂವ್ ಮಾಡುವುದಕ್ಕೆ ನಟ ಯಶ್ ಈ ಸಿನಿಮಾದ ಮೂಲಕ ನಿರೂಪಿಸಲು ಮುಂದಾಗಿರುವುದು ಕನ್ನಡರಿಗೆ ಹೆಮ್ಮೆ ಕೂಡ.
ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ಅವರು ‘ಟ್ಯಾಕ್ಸಿಕ್’ ನ ಟೀಸರ್‌ನಲ್ಲಿ ಬರುವ ಕಾರಿನಲ್ಲಿ ನಡೆಯುವ ಆ ದೃಶ್ಯವೊಂದರ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದ್ದು, ನಾನಾ ಮಂದಿ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವು ಮಂದಿ ಆ ದೃಶ್ಯ ಸರಿ ಎನ್ನುತ್ತಿದ್ದು, ನಟ ಯಶ್ ಮತ್ತು ನಿರ್ದೇಶಕರ ಸೃಜನ ಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವು ಮಂದಿ ಆ ಕಾರಿನೊಳಗೆ ನಡೆಯುವ ದೃಶ್ಯಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದು, ಮನೆ ಮಂದಿ ನೋಡುವ ಸಿನಿಮಾ ಇದಾಗಿರುವುದಿಲ್ಲ ಅಂಥ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೇ ಆ ದೃಶ್ಯಕ್ಕೆ ಸಂಬಂಧಪಟ್ಟಂತೆ ಅನೇಕ ಮಂದಿ ಟ್ರೋಲ್ ಮಾಡುತ್ತಿದ್ದಾರೆ ಕೂಡ.
ಈ ನಡುವೆ ನಟ ಯಶ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ವೇಳೆಯಲ್ಲಿ ಅವರ ತಂದೆ ತಾಯಿ ಮುಂದೆ ನಮ್ಮ ಅಪ್ಪನ ಜೊತಗೆ ಕೂತು ನೋಡಲಾರದ ಯಾವುದೇ ದೃಶ್ಯದಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಅಂಥ ಹೇಳಿದ್ದ ಕಾರ್ಯಕ್ರಮದ ತುಣುಕುಗಳನ್ನು ಹಲವು ಮಂದಿ ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಹಲವು ಹೆಡ್‌ಲೈನ್‌ಗಳೊಂದಿಗೆ ಹಲವು ಸಾಮಾಜಿಕ ಜಾಲತಾಣಗಳ ಪೇಜ್‌ಗಳಲ್ಲಿ, ಟ್ರೋಲರ್‌ಗಳು ನಾನಾ ರೀತಿಯಲ್ಲಿ ತಮ್ಮ ಆಕ್ರೋಶ, ನೋವು, ನಲಿವು ಸಿಟ್ಟು ಸೆಡವುಗಳನ್ನ ತೋಡುತ್ತಿದ್ದಾರೆ.
ಈ ನಡುವೆ ಟೀಸರ್‌ಗೆ ಸಂಬಂಧಪಟ್ಟಂತೆ ಸೆನ್ಸಾರ್ ಮಂಡಳಿಗೆ ದೂರು ನೀಡಿದ್ದು, ಟೀಸರ್‌ನಲ್ಲಿ ಅಶ್ಲೀಲ ದೃಶ್ಯವಿದೆ ಅಂತ ಅಮ್‌ಆದ್ಮಿ ಪಾರ್ಟಿ ಯುವ ಘಟಕ ದೂರು ನೀಡಿದ್ದು, ಟೀಸರ್‌ಗೆ ಸಂಬಂಧಪಟ್ಟಂತೆ ಸೂಕ್ತಕ್ರಮವನ್ನು ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
Gobsmacked by how crazy this teaser of #Toxic is … Dearest @TheNameIsYash you have hit it out of the park with your attitude and swag!!! On your birthday I wish you stupendous success, happiness, great health and love. – ( love to Radhika & kids) https://t.co/kLUTVHg8MP
— Riteish Deshmukh (@Riteishd) January 8, 2026








