ಚಿತ್ರದುರ್ಗ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿನೋದ್ ರಾಜ್ ಇಂದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ರೇಣುಕಾ ಸ್ವಾಮಿ ಅವರ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದಾರೆ.
ಹೌದು ಇಂದು ರೇಣುಕಾ ಸ್ವಾಮಿ ಮನೆಗೆ ವಿನೋದ್ ರಾಜ್ ಭೇಟಿ ನೀಡಲಿದ್ದಾರೆ. ಚಿತ್ರದುರ್ಗದ ವಿ ಆರ್ ಎಸ್ ಬಡಾವಣೆಯ ಮನೆಗೆ ಭೇಟಿ ನೀಡಲಿದ್ದಾರೆ.ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ವಿನೋದ್ ರಾಜ್ ಸಾಂತ್ವನ ಹೇಳಲಿದ್ದಾರೆ.
ಹಾಗಾಗಿ ಖುದ್ದು ವಿನೋದ್ ಅವರೇ ಕಾರು ಚಾಲನೆ ಮಾಡಿ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೊರಟಿದ್ದಾರೆ. ರೇಣುಕಾ ಸ್ವಾಮಿ ಕುಟುಂಬ ಭೇಟಿ ಮಾಡಿ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಪರಿಹಾರ ನೀಡಲಿದ್ದಾರೆ.
ಇತ್ತ ನಟ ದರ್ಶನ್ ಜೈಲಿನಿಂದ ಬಿಡುಗಡೆಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.ಇಂದು ಬೆಳಿಗ್ಗೆ ಅವರು ನವಚಂಡಿಕಾ ಹೋಮ, ಪಾರಾಯಣ, ಸೇರಿದಂತೆ ಹಲವು ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಿದ್ದಾರೆ.