ಬೆಂಗಳೂರು: ನಟ ಉಪೇಂದ್ರ ಪ್ರಿಯಾಂಕ ಮೊಬೈಲ್ ಹ್ಯಾಕ್ ಆಗಿದೆ ಎನ್ನಲಾಗಿದ್ದು, ಈ ಬಗ್ಗೆ ನಟ ಉಪೇಂದ್ರ ಅವರು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದು, ದಯವಿಟ್ಟು ಯಾವುದೇ ಕಾರಣಕ್ಕೂ ನನ್ನ ನಂಬರ್‌ನಿಂದ ಅಥಾವ ಪ್ರಿಯಾಂಕ ಅವರ ನಂಬರ್‌ನಿಂದ ಯಾವುದೇ ಮೆಸೆಜ್ ಬಂದರೆ ಅದಕ್ಕೆ ಮರು ಉತ್ತರ ನೀಡಬೇಡಿ. ಹಾಗೂ ಹಣ ನೀಡಬೇಡಿ ಅಂತ ಅವರು ಹೇಳಿದ್ದಾರೆ. ದಯವಿಟ್ಟು ಈ ಬಗ್ಗೆ ಎಲ್ಲರಿಗೂ ಮಾಹಿತಿಯನ್ನು ನೀಡಿ ಅಂತ ಹೇಳಿದ್ದಾರೆ.
ಈ ಬಗ್ಗೆ ದಂಪತಿಗಳಿಬ್ಬರು ದೂರು ನೀಡಲು ಸದಾಶಿವನಗರದಲ್ಲಿರುವ ಪೊಲೀಸ್ ಠಾಣೆಗೆ ತೆರಳಿದ್ದು, ದೂರು ನೀಡಲಿದ್ದಾರೆ ಎನ್ನಲಾಗಿದೆ.