ಬೆಂಗಳೂರು: ನಟ ಶಿವರಾಜ್ ಕುಮಾರ್ ಅನಾರೋಗ್ಯದ ಕಾರಣ ಅಮೇರಿಕಾದಲ್ಲಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇಂತಹ ಅವರಿಗೆ ಕೆಲವೇ ಕ್ಷಣಗಳಲ್ಲಿ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಆರಂಭಿಸುತ್ತಿರುವುದಾಗಿ ತಿಳಿದು ಬಂದಿದೆ.
ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯದ ಕಾರಣ ಅಮೇರಿಕಾದ ಪ್ಲೋರಿಡಾದಲ್ಲಿರುವಂತ ಮಿಯಾಮಿ ಕ್ಯಾನ್ಸರ್ ಇನ್ಟಿಟ್ಯೂಟ್ ಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಿಗೆ ಭಾರತೀಯ ಕಾಲಮಾನ ಸಂಜೆ 6 ಗಂಟೆಯಿಂದ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಆರಂಭಿಸಲಿದ್ದಾರೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಆರಂಭಿಸಲಿದ್ದಾರೆ. ಆ ಬಳಿಕ ಅವರು ಆಸ್ಪತ್ರೆಯಲ್ಲೇ ಒಂದು ತಿಂಗಳ ಕಾಲ ವಿಶ್ರಾಂತಿಯನ್ನು ಪಡೆಯಲಿದ್ದಾರೆ.
ನಟ ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆ ಪಡೆದು ಗುಣಮುಖರಾಗಿ ಬರಲಿ ಅಂತ ದೂರವಾಣಿ ಕರೆ ಮಾಡಿದಂತ ಸಿಎಂ ಸಿದ್ಧರಾಮಯ್ಯ ಅವರು ಶುಭ ಹಾರೈಸಿದ್ದಾರೆ. ಶಿವಣ್ಣ ಅಭಿಮಾನಿಗಳು ಕೂಡ ದೇವಸ್ಥಾನದಲ್ಲಿ ಪೂಜೆ, ಪುರಸ್ಕಾರದಲ್ಲಿ ತೊಡಗಿದ್ದು, ಬೇಗ ಗುಣಮುಖರಾಗಿ ಬರಲಿ ಅಂತ ಬೇಡಿಕೊಳ್ಳುತ್ತಿದ್ದಾರೆ.
ಜಗತ್ತಿನಲ್ಲಿ ಎಷ್ಟು ಸಾಲವಿದೆ.? ಯಾವ ದೇಶದ್ದು ಎಷ್ಟು.? ಭಾರತ ತೆಗೆದುಕೊಂಡದೆಷ್ಟು.? ಆಘಾತಕಾರಿ ವರದಿ ಬಹಿರಂಗ
BREAKING: ಇನ್ಮುಂದೆ ಡಿ.26ರಂದು ಪ್ರತಿ ವರ್ಷ ‘ಗ್ರಾ.ಪಂ ಡಾಟಾ ಆಪರೇಟರ್’ಗಳ ದಿನವಾಗಿ ಆಚರಣೆ: ಸಚಿವ ಪ್ರಿಯಾಂಕ್ ಖರ್ಗೆ