ಬೆಂಗಳೂರು : ಕಳೆದ ಡಿಸೆಂಬರ್ ನಲ್ಲಿ ನಟ ಶಿವರಾಜ ಕುಮಾರ್ ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದರು. ಬಳಿಕ ಕ್ಯಾನ್ಸರ್ ಗೆದ್ದ ನಂತರ ವಿಡಿಯೋ ಮುಖಾಂತರ ಅವರ ಪತ್ನಿ ಗೀತಾ ಅವರು ಶಿವರಾಜ್ ಕುಮಾರ್ ಕ್ಯಾನ್ಸರ್ ಅನ್ನು ಗೆದ್ದಿದ್ದಾರೆ ಎಂದು ಇತ್ತೀಚಿಗೆ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಇದೀಗ ನಟ ಶಿವರಾಜ್ ಕುಮಾರ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ನಟ ಶಿವರಾಜಕುಮಾರ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಫೋಟೋ ವೈರಲ್ ಆಗಿದ್ದು, ನಟ ಶಿವರಾಜಕುಮಾರ್ ಪತ್ನಿ ಗೀತಾ ಸೇರಿದಂತೆ ಫೋಟೋದಲ್ಲಿ ಹಲವರು ಇದ್ದಾರೆ. ಶಿವರಾಜಕುಮಾರ್ ಮೂತ್ರ ಕೋಶ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದೇ ಆಸ್ಪತ್ರೆಯಿಂದ ನಟ ಶಿವರಾಜಕುಮಾರ್ ಡಿಸ್ಚಾರ್ಜ್ ಆದರೂ ಕೂಡ ಅವರು ಸಧ್ಯಕ್ಕೆ ಭಾರತಕ್ಕೆ ಆಗಮಿಸುತ್ತಿಲ್ಲ. ಜನವರಿ 26ರಂದು ಅವರು ಭಾರತಕ್ಕೆ ಮರಳಲಿದ್ದು ಮಲ್ಲಿಕಾ ಫೆಬ್ರುವರಿಯಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಟ ರಾಮಚರಣ್ ಅವರ ಚಿತ್ರದಲ್ಲಿ ನಟಿಸಿ ರಾಜಕುಮಾರ್ ಅವರು ನಟಿಸಲಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.