ನವದೆಹಲಿ: ಬಾಲಿವುಡ್ ನ ಕೆಲವು ಬಿಗ್ ಹಿಟ್ ಚಿತ್ರಗಳಾದ ‘ಲಾಲ್ ಸಿಂಗ್ ಚಡ್ಡಾ’, ‘ರಕ್ಷಾ ಬಂಧನ್’, ‘ದೊಬಾರಾ’ ಮತ್ತು ಇತ್ತೀಚೆಗೆ ವಿಜಯ್ ದೇವರಕೊಂಡ ಅವರ ‘ಲೈಗರ್’ ಅನ್ನು ಬಹಿಷ್ಕರಿಸಿದ ನಂತರ, ನೆಟ್ಟಿಗರು ಈಗ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮುಂಬರುವ ಸೈ-ಫೈ ಥ್ರಿಲ್ಲರ್ ಚಿತ್ರ ‘ಬ್ರಹ್ಮಾಸ್ತ್ರ: ಭಾಗ 1 – ಶಿವ’ ಅನ್ನು ಬಹಿಷ್ಕರಿಸಲು ಹೇಳುತ್ತಿದ್ದಾರೆ. ಪ್ರಸ್ತುತ ಟ್ವಿಟ್ಟರ್ನಲ್ಲಿ #BoycottBrahmastra ಟ್ರೆಂಡಿಂಗ್ನಲ್ಲಿದೆ.
ಹೌದು, ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಪಾರ್ಟ್ ಒನ್-ಶಿವ ಚಿತ್ರಮಂದಿರದಲ್ಲಿ ಬಿಡುಗಡೆಗೆ ಒಂದು ವಾರ ಮುಂಚಿತವಾಗಿ ಸಿನಿಮಾವನ್ನು ಬಹಿಷ್ಕಾರ ಮಾಡುವ ಕೂಗು ಕೇಳಿ ಬಂದಿದೆ . ಧರ್ಮ ಪ್ರೊಡಕ್ಷನ್ಸ್ ಬೆಂಬಲಿತ ಚಿತ್ರ ಸೆಪ್ಟೆಂಬರ್ 9 ರಂದು ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬೆಳ್ಳಿತೆರೆಗೆ ಬರಲಿದೆ.
— Filmy Pulao (@FilmyPulao) August 27, 2022
ಗೋಮಾಂಸ ಸೇರಿದಂತೆ ನಾನಾ ರೀತಿಯ ನಾನ್ ವೆಜ್ ತಿನ್ನುತ್ತೇವೆ ಅಂತ ರಣಬೀರ್ ಕಪೂರ್ ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.