ಬೆಂಗಳೂರು : ಮೊನ್ನೆಯಷ್ಟೇ ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ (Bharat Jodo) ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದ ರಮ್ಯಾ ಇದೀಗ ಟ್ವೀಟ್ ಮೂಲಕ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದಾರೆ.
ಸೋನಿಯಾ ಗಾಂಧಿ (Sonia Gandhi) ಪರ ನಟಿ ರಮ್ಯಾ ಟ್ವೀಟ್ವೊಂದನ್ನು ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಇಟಲಿಯವರೇ ಆಗಿರಬಹುದು. ಆದರೆ ಸಾಕಷ್ಟು ಭಾರತೀಯರಿಗಿಂತ ಇವರು ನೈಜ ಭಾರತೀಯರಾಗಿದ್ದಾರೆ. ಅದು ಸತ್ಯ’ ಎಂದು ಟ್ವೀಟ್ ಮಾಡಿದ್ದಾರೆ.
ಮಂಡ್ಯದಲ್ಲಿ ರಮ್ಯಾ ಸೋತ ನಂತರ ರಾಜಕೀಯ ಕ್ಷೇತ್ರದಿಂದ ಒಂದೊಂದೆ ಹೆಜ್ಜೆಯನ್ನು ಹಿಂದಿಡುತ್ತಾ ಬಂದರು. ಅದರಲ್ಲೂ ಇತ್ತೀಚಿನ ತಿಂಗಳಲ್ಲಿ ಅವರು ಯಾವತ್ತೂ ರಾಜಕೀಯ ಮಾತನಾಡಲಿಲ್ಲ. ಸೋನಿಯಾ ಗಾಂಧಿ ಬಗ್ಗೆ ನಟಿ ರಮ್ಯಾ ಟ್ವೀಟ್ ಮಾಡಿದ್ದು, ಮತ್ತೆ ರಾಜಕೀಯದಲ್ಲಿ ರಮ್ಯಾ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರಾ ಎಂಬ ಬಗ್ಗೆ ಕುತೂಹಲ ಮೂಡಿದೆ.
Sonia ji maybe of italian origin but she’s more Indian than most Indians- for sure.
— Ramya/Divya Spandana (@divyaspandana) October 25, 2022
ಇತ್ತೀಚೆಗೆ ಸ್ಯಾಂಡಲ್ ವುಡ್ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ರಮ್ಯಾ ನಾಯಕಿಯಾಗಿ ಮತ್ತೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ ಎಂದು ಹೇಳುವ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದಾರೆ. ಈ ಸಿನಿಮಾದಿಂದ ಹಿಂದೆ ಸರಿದ ರಮ್ಯಾ ಕಿಚ್ಚ ಸುದೀಪ್ ಜೊತೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಗುಸು ಗುಸು ಕೂಡ ಕೇಳಿಬರುತ್ತಿದೆ.
ಈ ಚಿತ್ರವನ್ನು ಆ್ಯಪಲ್ ಬಾಕ್ಸ್ ಚಿತ್ರ ನಿರ್ಮಾಣ ಸಂಸ್ಥೆಯಡಿ ರಮ್ಯಾ ಅವರೇ ನಿರ್ಮಿಸುತ್ತಿದ್ದಾರೆ. ಇದು ರಮ್ಯಾ ಅವರ ಪ್ರೊಡಕ್ಷನ್ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಾಗಿದೆ. ಗರುಡ ಗಮನ ರಿಷಭ ವಾಹನದ ಮೂಲಕ ಮನೆಮಾತಾದ ರಾಜ್ ಬಿ ಶೆಟ್ಟಿ ಅವರು ನಿದೇಶಿಸುವ ಜೊತೆಗೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.
Watch: ಮನೆಗಳನ್ನೇ ಗುರಿಯಾಗಿಟ್ಟುಕೊಂಡು ದೀಪಾವಳಿ ರಾಕೆಟ್ ಬಿಟ್ಟ ಭೂಪ, ಪೋಲಿಸರು ಮಾಡಿದ್ದೇನು ಗೊತ್ತಾ?
Dangerous Road Video ; ಇದು ‘ವಿಶ್ವದ ಅತ್ಯಂತ ಅಪಾಯಕಾರಿ’ ರಸ್ತೆ, ಕೊಂಚ ಯಾಮಾರಿದ್ರು ಕಥೆ ಗೋವಿಂದ.!